ಜೆಡಿಎಸ್ ನಲ್ಲಿ ದೇವೇಗೌಡರ ಮಾತುಈಗ ವೇಸ್ಟ್-ಬಸವರಾಜ ಹೊರಟ್ಟಿ

Team Newsnap
1 Min Read
  • ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಇಲ್ಲ. ಆದರೆ ಮೈತ್ರಿ ಇರುತ್ತದೆ.
  • ಪಾಲುಗಾರಿಕೆ ಮೈತ್ರಿ ಇರುತ್ತದೆ.
  • ದೇವೇಗೌಡರು ಹೇಳುವುದನ್ನು ಹೇಳಲಿ, ನಾವು ಮಾಡುವುದನ್ನು ಮಾಡುತ್ತೇವೆ
  • ದೇವೇಗೌಡರ ರಾಜಕೀಯ ಆಲೋಚನೆಗಳು, ವಿಚಾರಧಾರೆಗಳು ಈಗ ವಕ್೯ ಔಟ್ ಆಗುವುದಿಲ್ಲ . ಹೀಗಾಗಿ ಅವರನ್ನು ಸುಮ್ಮನೆ ಇರುವಂತೆ ಹೇಳಿದ್ದೇವೆ.

ದೇವೇಗೌಡರ ರಾಜಕಾರಣ, ಆಲೋಚನೆ ಈಗ ನಡೆಯಲ್ಲ ಎಂದು ನೇರವಾಗಿ ಹೇಳುವ ಮೂಲಕ ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಮಾಜಿ ಪ್ರಧಾನಿ ದೇವೇಗೌಡರು ಈಗ ರಾಜಕಾರಣದಲ್ಲಿ ವೇಸ್ಟ್ ಬಾಡಿ ಲೆಕ್ಕಕ್ಕೆ ಸೇರಿಸಿಬಿಟ್ಟರೆ?

ಇಂತಹ ಹೇಳಿಕೆಗಳು ದೇವೇಗೌಡರು ಯಾವ ಲೆಕ್ಕಕ್ಕೆ ಸೇರಿಸುವುದು ಬೇಡ ಎಂಬ ಅರ್ಥ ಬರುತ್ತದೆ. ಆದರೆ ದೇವೇಗೌಡರು ಮಾತ್ರ ದಿನದ 24 ಗಂಟೆ ದುಡಿಯವ ಅಪರೂಪದ ರಾಜಕಾರಣಿ.

ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸುದ್ದಿಗಾರರ ಜೊತೆ ಮಾತನಾಡಿ ಹೇಳಿದಿಷ್ಟು.

ಅವರಷ್ಟಕ್ಕೆ ಅವರನ್ನು ಇರಲು ಹೇಳಿದ್ದೇವೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕಾರಣ, ಆಲೋಚನೆಗಳು ಈಗ ನಡೆಯುವುದಿಲ್ಲ. ಹೀಗಾಗಿ ಅವರಷ್ಟಕ್ಕೆ ಇರಲು ಹೇಳಿದ್ದೇವೆ. ನಾವು ಮಾಡೋದನ್ನು ಮಾಡುತ್ತೇವೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ಬಿಜೆಪಿ ಜೊತೆಗಿನ ಮೈತ್ರಿ, ದೇವೇಗೌಡರ ರಾಜಕೀಯದ ಬಗ್ಗೆ ಮುಕ್ತವಾಗಿ ಮಾತನಾಡಿದ ಹೊರಟ್ಟಿ ಬಿಜೆಪಿ ಹಾಗೂ ನಮ್ಮ ನಡುವೆ ಮಾಮೂಲಿಯಾಗಿ ಮೈತ್ರಿ ಆಗುತ್ತೆ. ಈ ಬಾರಿ ಮೈತ್ರಿ ಗಟ್ಟಿಯಾಗಿರುತ್ತೆ. ಇದು ಪಾಲುಗಾರಿಕೆಯ ಮೈತ್ರಿ ಆಗಿರುತ್ತದೆ. ಮೈತ್ರಿ ಮುರಿದರೆ ಏನಾಗುತ್ತೆ ಎಂದು ಬಿಜೆಪಿಯವರಿಗೂ ಗೊತ್ತಾಗಿದೆ. ಹೀಗಾಗಿ ನಿಮ್ಮಷ್ಟಕ್ಕೆ ನೀವಿರಿ ಅಂತ ದೇವೇಗೌಡರಿಗೆ ಹೇಳಿದ್ದೇವೆ ಎಂದರು.

ದೇವೇಗೌಡರ ವಿಚಾರ, ಆಲೋಚನೆಗಳು ಈಗ ನಡೆಯಲ್ಲ. ಅವರ ರಾಜಕಾರಣವೇ ಬೇರೆ, ಅವರು ಹೇಳುವುದನ್ನು ಹೇಳುತ್ತಾರೆ. ಕೇಳುವುದು ಬಿಡುವುದು ನಮಗೆ ಬಿಟ್ಟದ್ದು. ನಾವು ಮಾಡೋದನ್ನು ಮಾಡುತ್ತೇವೆ ಎಂದು ಹೊರಟ್ಟಿ ಹೇಳಿದರು.

ಕಾಂಗ್ರೆಸ್ ನವರೇ ಸೋಲಿಸಿದ್ದು :

ಸಿದ್ದರಾಮಯ್ಯ ಸೋಲಿನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ಕಾಂಗ್ರೆಸ್‍ನವರನ್ನು ಕಾಂಗ್ರೆಸ್‍ನವರೇ ಸೋಲಿಸಿದ್ದಾರೆ. ಇದರಲ್ಲಿ ಜೆಡಿಎಸ್ ಪಾತ್ರ ಇಲ್ಲ ಅನ್ನೋದು ಸ್ಪಷ್ಟವಾಯಿತು. ಅಲ್ಲದೆ ವಿಪಕ್ಷದಲ್ಲಿದ್ದಾಗ ಸೋಲಿಸುವುದೇ ಧರ್ಮ ಎಂದರು.

Share This Article
Leave a comment