ಇಂದು ಉತ್ತರ ಪ್ರದೇಶದ 3 ನೇ ಹಂತ- ಪಂಜಾಬ್ ನಲ್ಲಿ ಒಂದೇ ಹಂತದಲ್ಲಿ ಮತದಾನ ಆರಂಭ

Team Newsnap
1 Min Read

ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಇಂದು ಮತದಾನ ದಿನ

ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 3ನೇ ಹಂತದ ಮತದಾನ ಶುರುವಾಗಿದೆ.

ಇಂದಿನ ಮತದಾನದಲ್ಲಿ ಅಖಿಲೇಶ್ ಸೇರಿದಂತೆ ಹಲವಾರು ಘಟಾನುಘಟಿಗಳು ಭವಿಷ್ಯ ನಿರ್ಧರಿಸಲಿದೆ.

59 ಕ್ಷೇತ್ರ 627 ಅಭ್ಯರ್ಥಿಗಳು.. 2.15 ಕೋಟಿ ಮತದಾರರು
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ 3ನೇ ಹಂತದ ಮತದಾನ ಪ್ರಕ್ರಿಯೆ ಶುರುವಾಗಿದೆ.

16 ಜಿಲ್ಲೆಗಳ 59 ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ, 2 ಕೋಟಿ 15 ಲಕ್ಷ ಮತದಾರರು 627 ಅಭ್ಯರ್ಥಿಗಳ ಹಣೆಬರಹ ಬರೆಯುತ್ತಿದ್ದಾರೆ.

8 ಜಿಲ್ಲೆಗಳಲ್ಲಿ ಯಾದವ-ಮುಸ್ಲಿಂ ಪ್ರಾಬಲ್ಯ 16 ಜಿಲ್ಲೆಗಳ ಪೈಕಿ 8ರಲ್ಲಿ ಮುಸ್ಲಿಂ ಹಾಗೂ ಯಾದವ ಮತಗಳೇ ನಿರ್ಣಾಯಕ.

59 ಕ್ಷೇತ್ರಗಳ ಪೈಕಿ 29ರಲ್ಲಿ ಯಾದವ-ಮುಸ್ಲಿಂ ಜನಸಂಖ್ಯೆ ಶೇ.40ರಷ್ಟಿದೆ. ಹೀಗಾಗಿ, ಈ ಹಂತದಲ್ಲಿ ಎಸ್ಪಿ ಮುನ್ನಡೆ ಪಡೆಯುತ್ತದೆ ಎಂಬುದು ಸಮಾಜವಾದಿ ಪಕ್ಷದ ವಿಶ್ವಾಸ.

59 ಕ್ಷೇತ್ರಗಳಲ್ಲಿ ಓಬಿಸಿ ಹಾಗೂ ಮೇಲ್ವರ್ಗದ ಬ್ರಾಹ್ಮಣ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಲೋಧ, ಕಾಯಸ್ಥ, ದಲಿತ ಜಾಟ್ ಮತಗಳು ಕೂಡ ನಿರ್ಣಾಯಕವಾಗಿವೆ.

ಈ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈ ಸಮುದಾಯಗಳು ತಮ್ಮ ಪಕ್ಷದ ಪರ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ಬಿಜೆಪಿ ನಾಯಕರದ್ದು.

ಪಂಜಾಬ್‌ನಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ
ಪಂಚರಾಜ್ಯ ಚುನಾವಣೆಗಳ ಪೈಕಿ ಉತ್ತರ ಪ್ರದೇಶ ಬಿಟ್ಟರೆ ಹೆಚ್ಚು ಗಮನ ಸೆಳೆದಿರುವ ಮತ್ತೊಂದು ರಾಜ್ಯ ಪಂಜಾಬ್.

ಇಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಎಲ್ಲಾ 117 ಕ್ಷೇತ್ರಗಳಲ್ಲಿ 1,304 ಅಭ್ಯರ್ಥಿಗಳ ಭವಿಷ್ಯ ಇಂದು ಮತಯಂತ್ರ ಸೇರಲಿದೆ. 2.14 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

Share This Article
Leave a comment