ಬೆಂಗಳೂರು ಈಗ ದೋಖಾ ರಾಜಧಾನಿ! 100 ಕೋಟಿ ಉಂಡೆ ನಾಮ ಹಾಕಿದ ವಿಶ್ವ ಪ್ರಿಯ ಫೈನಾನ್ಸ್

Team Newsnap
2 Min Read

ಬೆಂಗಳೂರು ರಾಜ್ಯದ ರಾಜಧಾನಿ ಹೌದು ಜೊತೆಗೆ ದೋಖಾ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೋಖಾಗೆ ರಾಜಧಾನಿಯಾಗಿದೆ!

ಬೆಂಗಳೂರಿನಲ್ಲಿ ಐಎಂಎ ರೀತಿಯ ಮತ್ತೊಂದು ದೋಖಾ ಕಂಪನಿಯ ಮಾಲೀಕರುಅಂದಾಜು 100 ಕೋಟಿ ರುಗಳಿಗೆ ಉಂಡೆ ನಾಮ ಹಾಕಿ ಎಸ್ಕೇಪ್ ಆಗಿದ್ದಾರೆ.

ಜನರು ಎಷ್ಟೇ ಹಣ ಕಳೆದುಕೊಂಡರು ಮತ್ತೆ , ಮತ್ತೆ ಅಧಿಕ ಬಡ್ಡಿ ಆಸೆಗೆ ಮರುಳಾಗಿ ದುಡಿದ ಹಣಕ್ಕೆ ನಾಮ ಹಾಕಿಸಿಕೊಳ್ಳುತ್ತಾರೆ.

ಈಗ ವಿಶ್ವ ಪ್ರಿಯಾ ಫೈನಾನ್ಸ್ ಕಂಪನಿಯೊಂದು ಬಾಗಿಲು ಮುಚ್ಕೊಂಡು ನಾಟ್ ರಿಚಬಲ್ ಆಗಿದೆ. ಲಕ್ಷ ಲಕ್ಷ ದುಡ್ಡು ಕಟ್ಟಿದವರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ರಾಮಸ್ವಾಮಿಯಿಂದ ಮೋಸ:

ಐಎಂಎ, ಅಜ್ಮೀರಾ ಹಾಗೂ ಆಂಬಿಡೆಂಟ್ ದೋಖಾ ಕಂಪನಿಗಳ ನಂತರದ ಸರದಿ ವಿಶ್ವ ಪ್ರಿಯ ಫೈನಾನ್ಸ್ ಕಂಪನಿ ಆ ಸಾಲಿಗೆ ಸೇರಿಕೊಂಡಿದೆ. ತಮಿಳುನಾಡು ಮೂಲದ ಸುಬ್ರಮಣ್ಯಂ ರಾಮಸ್ವಾಮಿ ಎಂಬವರ ಒಡೆತನದ ವಿಶ್ವಪ್ರಿಯ ಫೈನಾನ್ಸಿಯಲ್ ಆಂಡ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯೇ ಫ್ರಾಡ್ ಮಾಡಿರುವ ಆರೋಪ ಹೊತ್ತಿದೆ.

ತಮಿಳುನಾಡು, ಕರ್ನಾಟಕ ಸೇರಿ ದಕ್ಷಿಣ ಭಾರತದ ಹಲವೆಡೆ ಈ ವಿಶ್ವಪ್ರಿಯ ಕಂಪನಿ ತನ್ನ ಕಾರ್ಯನಿರ್ವಹಿಸಿತ್ತು. ಇದಾದ ಬಳಿಕ ಕೆಲವೇ ವರ್ಷಗಳಲ್ಲಿ ವಿಶ್ವಪ್ರಿಯ ಫೈನಾನ್ಸಿಯಲ್ ಕಂಪನಿ ತನ್ನ ನಂಬಿಕಸ್ಥ ಗ್ರಾಹಕರಿಗೆ ಕೋಟಿ-ಕೋಟಿ ವಂಚಿಸಿ ಬಾಗಿಲು ಮುಚ್ಚಿಕೊಂಡಿದೆ.

100 ಕೋಟಿ ರು ಗೆ ಪಂಗನಾಮ !

2012 ರಲ್ಲಿ ಬೆಂಗಳೂರನಲ್ಲಿ ತನ್ನ ಬ್ರ್ಯಾಂಚ್ ಓಪನ್ ಮಾಡಿದ್ದ ವಿಶ್ವಪ್ರಿಯ ಫೈನಾನ್ಸಿಯಲ್ ಕಂಪನಿ ನಿವೃತ್ತ ನೌಕರರನ್ನು ಹಾಗೂ ವೃದ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡಿತ್ತು. ಬಳಿಕ ಮನೆ-ಮನೆಗೆ ತೆರಳುತ್ತಿದ್ದ ವಿಶ್ವಪ್ರಿಯ ಫೈನಾನ್ಸಿಯಲ್ ಕಂಪನಿ ಏಜೆಂಟ್ ಗಳು ವೃದ್ಧರ ಮನವೊಲಿಸಿ, ಶೇ.10.47 ರಷ್ಟು ಬಡ್ಡಿ ಆಸೆ ತೋರಿಸಿ ಏನಿಲ್ಲ ಅಂದ್ರು ಒಬ್ಬೊರಿಂದ ಕನಿಷ್ಠ 1 ಲಕ್ಷ ದಿಂದ 50 ಲಕ್ಷದ ವರೆಗೂ ಠೇವಣಿ ಮಾಡಿಸಿಕೊಂಡಿದ್ದಾರೆ. ಶಾಖೆ ಆರಂಭವಾದ ನಂತರ ವರ್ಷಕ್ಕೆ ಒಮ್ಮೆ ಬಡ್ಡಿ ಹಣ ಹಾಕಲಾಗುವುದು ಅಂತಾ ನಂಬಿಸಿ ಒಂದೇ ಸಾರಿ ಕೈ ಎತ್ತಿದ್ದಾರೆ.

ಸದ್ಯ ಅಸಲಿ ಹಣವೂ ಇಲ್ಲ, ಬಡ್ಡಿ ಇಲ್ಲದೇ ಹೂಡಿಕೆ ಮಾಡಿದ ಜನರು ಕೋರ್ಟ್ ಮೂಲಕ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ನಗರದ ಗಿರಿನಗರ, ಸಿದ್ದಾಪುರ ಪೊಲೀಸ್ ಠಾಣೆಗಳಲ್ಲಿ ಸದ್ಯಕ್ಕೆ ಕೇಸ್ ಗಳು ದಾಖಲಾಗುತ್ತಲೇ ಇವೆ. ಎರಡು ಠಾಣೆಗೆ ಬಂದಿರುವ ಕೇಸ್ ಅಧಾರದ ಮೇಲೆ ಎಂಟು ಕೋಟಿಗೂ ಅಧಿಕ ಎನ್ನಲಾಗಿದೆ. ಇನ್ನೂ ವಿಶ್ವಪ್ರಿಯ ಫೈನಾನ್ಸ್ ಕಂಪನಿ ಒಟ್ಟು ನೂರು ಕೋಟಿಗೂ ಅಧಿಕ ಹಣ ವಂಚನೆ ಮಾಡಿರಬಹುದು ಅಂತಾ ಪೊಲೀಸರು ಲೆಕ್ಕಾಚಾರ. ಒಟ್ಟಾರೆ ಬಡ್ಡಿ ಆಸೆಗೆ ಹಳ್ಳಕ್ಕೆ ಬಿದ್ದವರ ಸ್ಥಿತಿ ಈಗ ಸಮಾಧಿಯಾಗುವ ಹಂತ ತಲುಪಿದೆ.

Share This Article
Leave a comment