February 23, 2026

Newsnap Kannada

The World at your finger tips!

vishal

ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಹೊರಲು ಸಿದ್ಧರಾದ ವಿಶಾಲ್ – ಅಪ್ಪು ಪತ್ನಿ ಅಶ್ವಿನಿ ಬಳಿ ಮನವಿ

Spread the love

ಮೈಸೂರಿನ ಶಕ್ತಿಧಾಮದ ಮಕ್ಕಳ ಪಾಲನೆ ಪೋಷಣೆ ಜವಾಬ್ದಾರಿ ಹೊರಲು ತಮಿಳು ನಟ ವಿಶಾಲ್ ಸಿದ್ಧರಾಗಿದ್ದಾರೆ.

ದಿ. ನಟ ಪುನೀತ್ ರಾಜ್‍ಕುಮಾರ್ ಮನೆಗೆ ಬುಧವಾರ ಆಗಮಿಸಿದ ವಿಶಾಲ್, ಪುನೀತ್ ಪತ್ನಿ ಅಶ್ವಿನಿ ಬಳಿ ಈ ಬಗ್ಗೆ ಮನವಿ ಮಾಡಿಕೊಂಡರು.

ನಿನ್ನೆ ಶಿವರಾಜ್ ಕುಮಾರ್ ಜೊತೆ ಮಾತನಾಡಿದ್ದ ವಿಶಾಲ್ ಇಂದು ಪುನೀತ್ ಮನೆಗೆ ಆಗಮಿಸಿ ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಬಗ್ಗೆ ಅಶ್ವಿನಿ ಜೊತೆ ಪ್ರಸ್ತಾಪ ಮಾಡಿ ಅನುಮತಿ ಕೇಳಿದರು. ಕೆಲವೇ ದಿನಗಳಲ್ಲಿ ಈ ಬಗ್ಗೆ ತಿಳಿಸುವುದಾಗಿ ಅಶ್ವಿನಿ ಭರವಸೆ ನೀಡಿದರು.

1,800 ವಿದ್ಯಾರ್ಥಿಗಳ ಜವಾಬ್ದಾರಿ ಬಗ್ಗೆ ವಿಶಾಲ್, ಅಶ್ವಿನಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಶಿವಣ್ಣ ಬಳಿಯೂ ಈ ಬಗ್ಗೆ ಚರ್ಚೆ ನಡೆಸಿದರು. ಇದಕ್ಕೂ ಮೊದಲು ಅಪ್ಪು ಸಮಾಧಿ ಬಳಿ ತೆರಳಿದ ವಿಶಾಲ್ ಪೂಜೆ ಸಲ್ಲಿಸಿದರು.

ಪುನೀತ್‍ನನ್ನು ನೆನಪಿಸಿಕೊಂಡಾಗ ನನ್ನ ಮನಸ್ಸಿಗೆ ಒಂದು ವಿಷಯ ಬಂತು. ನಿನ್ನ ಗೆಳೆಯನಾಗಿ ಮಾತು ಕೊಡುತ್ತಿದ್ದೇನೆ. ಆ 1,800 ಮಕ್ಕಳಿಗೆ ನಾನು ವಿದ್ಯಾಭ್ಯಾಸ ಕೊಡಿಸುತ್ತೇನೆ. ಮುಂದಿನ ವರ್ಷದಿಂದ ನಿಮ್ಮ ಫೌಂಡೇಷನ್, ನಿಮ್ಮ ಸಮಾಜಸೇವೆಯನ್ನು ನಾನು ಮುಂದುವರೆಸುತ್ತೇನೆ ಅಂತ ಭರವಸೆ ನೀಡಿದ್ದರು.

error: Content is protected !!