September 29, 2022

Newsnap Kannada

The World at your finger tips!

veerendra heggade

ರಾಜ್ಯಸಭಾ ಸದಸ್ಯರಾಗಿ ವೀರೇಂದ್ರ ಹೆಗ್ಗಡೆ ಕನ್ನಡದಲ್ಲೇ ಪ್ರಮಾಣವಚನ

Spread the love

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ರಾಜ್ಯಸಭಾ ಸದಸ್ಯರಾಗಿ ಗುರುವಾರ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು.

ಜುಲೈ ಮೊದಲವಾರ ವೀರೇಂದ್ರ ಹೆಗ್ಗಡೆ ಸೇರಿದಂತೆ ದಕ್ಷಿಣ ಭಾರತದ ನಾಲ್ವರು ಗಣ್ಯರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.

ಈ ಪೈಕಿ ಸಂಗೀತ ನಿರ್ದೇಶಕ ಇಳೆಯರಾಜಾ ಹಾಗೂ ಪಿಟಿ ಉಷಾ ಕೂಡಾ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು.

ಕರ್ನಾಟಕದ ಕರಾವಳಿ ಭಾಗದಿಂದ ಪ್ರಸ್ತುತವಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ಡಾ. ವೀರೇಂದ್ರ ಹೆಗ್ಗಡೆಯವರು ಇಂದು ರಾಜ್ಯಸಭೆಯ ಸ್ಪೀಕರ್ ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು.

ವೀರೇಂದ್ರ ಹೆಗ್ಗಡೆಯವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅತ್ಯಂತ ಗೌರವಯುತವಾಗಿ ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ಬರಮಾಡಿಕೊಂಡು, ಸನ್ಮಾನಿಸಿ ಅಭಿನಂದಿಸಿದರು.

error: Content is protected !!