December 29, 2024

Newsnap Kannada

The World at your finger tips!

untitled 3 1

ಕನ್ನಡದ ಬೆಡಗಿಯರ ಜೊತೆಗೂ ವಿರಾಟ್ ರಿಲೇಶನ್ಸ್ ?

Spread the love

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹುಡುಗಿಯರ ವಿಚಾರದಲ್ಲೂ ವಿರಾಟ್ ರೂಪ ದರ್ಶನ ತೋರಿದ್ದಾರೆ.

ಆದರೆ‌ ಅವೆಲ್ಲವೂ ಮದುವೆಗಿಂತ ಮುಂಚಿನ ಆಟಗಳು ಎಂಬುದೇ ಸಮಾಧಾನಕರ ಸಂಗತಿ.

ಅನುಷ್ಕಾ ಶರ್ಮಾರ ಮದುವೆ ಆಗುವ ಮೊದಲು ಜಸ್ಟ್ ಐದು ಗರ್ಲ್‌ಫ್ರೆಂಡ್ಸ್‌ ಜೊತೆ ಡೇಟಿಂಗ್ ಮಾಡಿದ್ದರಂತೆ ಇದರಲ್ಲಿ ಕನ್ನಡ ನಟಿಯರು ಸಹ ಸೇರಿದ್ದಾರಂತೆ.

ಡ್ರಗ್‌ ಕೇಸ್‌ನಲ್ಲಿ ಸಕತ್‌ ಸುದ್ದಿಯಲ್ಲಿರುವ ಹಾಟ್ ಬೆಡಗಿ‌ ನಟಿ ಸಂಜನಾ ಗಲ್ರಾನಿ ಜೊತೆ ಕೂಡ ವಿರಾಟ್ ‌ಹೆಸರೂ ಕೂಡ ಲಿಂಕಪ್‌ ಆಗಿತ್ತು.

main qimg 7a0397bd3f2ebb74ad3e96f940504ff0

ಟೀಮ್‌ ಇಂಡಿಯಾದ ಕ್ಯಾಪ್ಟ್‌ನ್‌ ರಿಲೆಷನ್‌ಶಿಪ್‌ನಲ್ಲಿದ್ದವರ ಪಟ್ಟಿ ಇಲ್ಲಿದೆ. ಅವರಲ್ಲಿ ಬಹುತೇಕರು ನಟಿಯರು.

ವಿರಾಟ್ ಕೊಹ್ಲಿ, ಪ್ರಸ್ತುತ ಭಾರತದ ನಾಯಕ ಮತ್ತು ಅಂತರರಾಷ್ಟ್ರೀಯ ಸೆಲೆಬ್ರಿಟಿ. ತಮ್ಮ ಕೆರಿಯರ್‌ನ ಆರಂಭದಿಂದಲೂ ಲೈಮ್‌ಲೈಟ್‌ನಲ್ಲಿದ್ದಾರೆ ಈ ದೆಹಲಿಯ ‘ಪಂಜಾಬಿ ಹುಡುಗ’. ಲೇಡಿ ಲವ್‌ ಅನುಷ್ಕಾಶರ್ಮಾಳನ್ನು ಮದುವೆಯಾಗುವ ಮೊದಲು ಅನೇಕ ಸುಂದರ ಯುವತಿಯರ ಹಾರ್ಟ್‌ ಥ್ರಾಬ್ ಆಗಿದ್ದರು.

ಅನುಷ್ಕಾಗೂ ಮೊದಲು ಕೊಹ್ಲಿ ಹೆಸರು ಹಲವು ನಟಿಯರೊಂದಿಗೆ ಕೇಳಿಬಂದಿತ್ತು. ಆದರೆ ವಿರಾಟ್‌ ಬಲು ಜಾಣ ಲೌವ್ ಲೈಫ್ ನಿಂದ ಕ್ರಿಕೆಟ್ ಹಾಳಾಗಲು ಬಿಡಲಿಲ್ಲ.‌

ಸಾಕ್ಷಿ , ಸಂಜನಾಳ ಜೊತೆಗೆ ರಿಲೇಶನ್ಸ್?

ವಿರಾಟ್ ಕೊಹ್ಲಿ ಕ್ರಿಕೆಟ್ ಜೀವನದ ಆರಂಭದಲ್ಲಿ ತಮಿಳು ಚಿತ್ರ ಗಳಲ್ಲಿ ನಟಿಸಿದ ಕನ್ನಡದ ಸಾಕ್ಷಿ ಅಗರ್ವಾಲ ಮೊದಲ ಗಲ್೯ ಫ್ರೆಂಡ್. ಆಕೆಯ ಜೊತೆ ಸುತ್ತಾಡಿದ ನಂತರ ಕೆಲವು ತಿಂಗಳಲ್ಲಿ ರಿಲೇಶನ್ಸ್ ಮುರಿದು ಬಿತ್ತು.

ನಂತರ ಡ್ರಗ್ಗಿಣಿ, ಮಾದಕ ಬೆಡಗಿ ಸಂಜನಾ ಗಿಲ್ರಾಣಿ, ವಿರಾಟ್ ನ ಬಾಹುಗಳಿಗೆ ಬಂಧಿಯಾಗಿದ್ದರಂತೆ. ಆಕೆಯೊಂದಿಗೆ ಟೆನ್ನಿಸ್ ಆಡುವುದು ಲಾಂಗ್ ಡ್ರೈವ್ ಹೋಗುವ ಮೂಲಕ ಆಕೆಯ ಜೊತೆಯಲ್ಲೂ ಕೆಲವು ಕಾಲ ರಿಲೇಶನ್ಸ್ ನಲ್ಲಿದ್ದರು ವಿರಾಟ್.

vermicompost 1111

ಆದರೆ ನಾನು ಸಂಜನಾ ಕೇವಲ ಗೆಳೆಯರು ಎಂದು ಹೇಳಿದ್ದ ವಿರಾಟ್ ನ ನೆನಪು ಮಾತ್ರ ಈ ಗೆಳತಿಯರ ಜೊತೆಯಲ್ಲಿ ಇದೆ. ಏಕೆಂದರೆ ವಿರಾಟ್ ಈಗ ಮದುವೆಯಾಗಿದ್ದಾರೆ. ಸಧ್ಯದಲ್ಲೇ ತಂದೆಯೂ ಆಗುತ್ತಾರೆ. ಹೀಗಾಗಿ ಎಲ್ಲಾ ರಿಲೇಶನ್ಸ್ ಗಳಿಗೆ ಗುಡ್ ಬೈ ಹೇಳಿರುವ ವಿರಾಟ್ ವಿಶ್ವರೂಪ ದರ್ಶನವನ್ನು ಅನುಷ್ಕಾಗೆ ಗೊತ್ತಿದ್ದರೆ ಸಾಕು.

Copyright © All rights reserved Newsnap | Newsever by AF themes.
error: Content is protected !!