ಮೈಸೂರಿನಿಂದ ಮಂಗಳೂರಿಗೆ ವಿಮಾನದ ಮೂಲಕವೇ ಅಂಚೆ ಸೇವೆ ಆರಂಭ

Team Newsnap
1 Min Read

ಮೈಸೂರು ಮತ್ತು ಮಂಗಳೂರು ನಡುವೆ ನೇರ ವಿಮಾನಯಾನ ಸೇವೆ ಆರಂಭವಾದ ಬೆನ್ನಲ್ಲೇ
ಅಂಚೆ ಇಲಾಖೆಯಿಂದ “Flight Special Cover” ಅನ್ನು ಮೈಸೂರು ಮತ್ತು ಮಂಗಳೂರು ನಿಂದ ರವಾನಿಸುವ ವ್ಯವಸ್ಥೆಯೂ ಆರಂಭವಾಯಿತು.

ಅಂಚೆ ಇಲಾಖೆಯ ASP ರಾಜುಕಾಳೇಶ್ವರ್ ರವರು ಮೊದಲ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣಿಸಿ, ಮೈಸೂರು ಅಂಚೆ ವಿಭಾಗದ ವಿಶೇಷ ಲಕೋಟೆಯನ್ನು ಮಂಗಳೂರು ಅಂಚೆ ವಿಭಾಗಕ್ಕೆ ತಲುಪಿಸಿ, ಮಂಗಳೂರು ಅಂಚೆ ವಿಭಾಗದ ವಿಶೇಷ ಲಕೋಟೆಯನ್ನು ಮೈಸೂರಿಗೆ ತಂದಿದ್ದಾರೆ.‌

vermicompost 1111

ಎರಡೂ ಕಡೆಯಿಂದ ಪ್ರಯಾಣದ ಅವಧಿ ಕೇವಲ ಮೂರು ಘಂಟೆಗಳು.
ಎ.ಕೆ. ನಾಯ್ಕ್ (ಹಿರಿಯ ಅಂಚೆ ಅಧೀಕ್ಷಕರು, ಮೈಸೂರು ಅಂಚೆ ವಿಭಾಗ, ) ವಿಮಾನ ನಿಲ್ದಾಣದಲ್ಲಿ, ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ ಹಾಗು Air Alliance CEO ಹರ್ ಪ್ರೀತ್ ಸಿಂಗ್ ಅವರೊಂದಿಗೆ ASP ರಾಜುಕಾಳೇಶ್ವರ್ ರವರಿಗೆ ವಿಶೇಷ ಲಕೋಟೆಯುಳ್ಳ ಬ್ಯಾಗನ್ನು ಹಸ್ತಾಂತರಿಸಿದರು.

post
ಸಿಇಒ ಹರ್ ಪ್ರೀತ್ ಸಿಂಗ್


ರಾಜುಕಾಳೇಶ್ವರ್ ರವರಿಗೆ ಬೋರ್ಡಿಂಗ್ ಪಾಸ್ ಅನ್ನು ಹಸ್ತಾಂತರಿಸಿದರು.
ಈ ವಿಶೇಷ ಲಕೋಟೆಗಳು ಮೈಸೂರು ಮತ್ತು ಮಂಗಳೂರು ದಿನಾಂಕ ಮುದ್ರೆಗಳಲ್ಲದೆ (Pictorial Cancelation ಸಹ) ASP ರಾಜುಕಾಳೇಶ್ವರ್ ರವರ ಸಹಿಯನ್ನು ಹೊಂದಿರತ್ತದೆ.
ಮೈಸೂರು ಪ್ರದಾನ ಅಂಚೆ ಕಛೇರಿಯ Philately Bureau ದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಈ ಮೂಲಕ ಮೈಸೂರು ಅಂಚೆ ವಿಭಾಗ ಒಂದು ವಿಶೇಷ ಸಂದರ್ಭದ ಭಾಗಿ ಗಮನಸೆಳೆದಿದೆ.

Share This Article
Leave a comment