December 26, 2024

Newsnap Kannada

The World at your finger tips!

sudeep

ಕಿಚ್ಚನ ‘ವಿಕ್ರಾಂತ್ ರೋಣ’ : ದುಬೈನ ಬುರ್ಜ್ ಖಲೀಫಾದ ಮೇಲೆ ನಾಳೆ ಟೀಸರ್ ಬಿಡುಗಡೆ

Spread the love

ನಾಳೆ ಭಾನುವಾರ ವಿಕ್ರಾಂತ್ ರೋಣ ಚಿತ್ರದ ಕಟೌಟ್ ದುಬೈನ ಬುರ್ಜ್ ಖಲೀಫಾದ ಮೇಲೆ ಅನಾವರಣ ಆಗಲಿದೆ. ಬುಜ್೯ ಖಲೀಫಾದ ಮೇಲೆ 180 ಸೆಕೆಂಡುಗಳ ಟೀಸರ್ ರಿಲೀಸ್ ಆಗಲಿದೆ.

ವಿಕ್ರಾಂತ್ ರೋಣ 11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಲ್ಲ, ಪ್ಯಾನ್ ವರ್ಲ್ಡ್​​ ಸಿನಿಮಾ ಎಂದು ಚಿತ್ರತಂಡದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

ಈ ಎಲ್ಲಾ ಮಾಹಿತಿಯನ್ನು ನಾಳೆ ನಡೆಯಲಿರುವ ವಿಕ್ರಾಂತ್ ರೋಣ ಟೀಸರ್ ರಿಲೀಸ್​ಗೆ ಸಂಬಂಧಿಸಿ ದುಬೈನಲ್ಲಿರುವ ನಟ ಸುದೀಪ್, ವೀಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗಾರರೊಂದಿಗೆ ಹಂಚಿಕೊಂಡರು.

 ನನ್ನ ವೃತ್ತಿ ಜೀವನದ 25 ವರ್ಷ ಜರ್ನಿಯಲ್ಲಿ ಪಾಲುದಾರರಾಗಿರೋ ಎಲ್ಲರಿಗೂ ಧನ್ಯವಾದಗಳು. ನಾಳೆಯಿಂದ 26 ನೇ ವರ್ಷದ ಜರ್ನಿ ಶುರು ಆಗುತ್ತೆ’‌ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಂತಸ ಹೇಳಿಕೊಂಡರು.

ಬುರ್ಜ್ ಖಲೀಫಾ ಆಯ್ಕೆ ಬಗ್ಗೆ ಸುದೀಪ್‌ ಹೇಳಿದ್ದೇನು? :

ಬೇರೆ ಭಾಷೆಯಲ್ಲಿ, ಬೇರೆ ದೇಶದಲ್ಲಿ ನಮ್ಮ ಸಿನಿಮಾ ರಿಲೀಸ್ ಆಗ್ತಿದೆ. ನಂಬಿಕೆ ಇಟ್ಟು ಸಿನಿಮಾ‌ ಮಾಡಿದ್ದೀವಿ. ಹಲವು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಫಸ್ಟ್ ಟೈಂ ಇಲ್ಲಿ ಕಟೌಟ್ ನಿಲ್ಲಿಸುವ ಸಂಭ್ರಮ ಮನೆ ಮಾಡಿದೆ. ಇದು ತುಂಬಾನೇ ಸ್ಪೇಷಲ್. ಅದರಲ್ಲೂ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಟೀಸರ್ ರಿಲೀಸ್ ಆಗುತ್ತಿರೋದು ಕೂಡ ಒಂದು ರೀತಿಯ ಸ್ಪೇಷಲ್ ಅನುಭವ. ವಿಕ್ರಾಂತ್ ರೋಣ ಒಂದು ಅಡ್ವೆಂಚರಸ್ ಸಿನಿಮಾ ಎಂದರು.

ಕನ್ನಡ ಸಿನಿಮಾ ರಂಗ ಕುರಿತು ಸುದೀಪ್ ಮಾತನಾಡಿ, ಚಿತ್ರರಂಗದಲ್ಲಿ 25 ವರ್ಷ ಇರುತ್ತವೆ ಎನ್ನುವ ನಂಬಿಕೆ ಇರಲಿಲ್ಲ. ಇವತ್ತಿಗೂ ಹೊಸಬರಿಂದ ನಾವು ಕಲಿಯೋದು ತುಂಬಾ ಇದೆ ಎಂದು ತಿಳಿಸಿದರು.

ಮೈ ಆಟೋಗ್ರಾಫ್ ನಿಂದ ಭರವಸೆ ಜೀವನ ಆರಂಭ

‘ಮೈ ಆಟೋಗ್ರಾಫ್’ ಸಿನಿಮಾಗೂ ಮುಂಚೆ ನನ್ನ ಸಿನಿಮಾ ಜೀವನ ಕಷ್ಟಕರವಾಗಿತ್ತು. ಆ ಸಿನಿಮಾ ಬಳಿಕ ಹುಮ್ಮಸ್ಸು ಬಂತು. ಆ ಚಿತ್ರ ಮಾಡಲಿಲ್ಲ ಅಂದಿದ್ರೆ ಊಹೆ ಮಾಡೋಕೂ ಆಗದಂತಹ ಕಷ್ಟದ ಪರಿಸ್ಥಿತಿ ಎದುರಾಗುತ್ತಿತ್ತು ಎಂದರು.

ಆ ಸಿನಿಮಾ ಮಾಡಲು ನನ್ನ ತಂದೆಯ ಮನೆಯ ಪತ್ರಗಳನ್ನು ಅಡಮಾನ ಮಾಡಿದೆ. ಆ ಚಿತ್ರ ಸಕ್ಸಸ್ ಆಗಿಲ್ಲ ಅಂದಿದ್ದರೆ ಜೀವನ ಕಷ್ಟವಾಗ್ತಿತ್ತು. ಸದ್ಯ ಈಗ ಫ್ಯಾಮಿಲಿ ಜೊತೆ ಇರೋದು ಸಂತಸ ತಂದಿದೆ, ಎಲ್ಲರಿಂದ ನನ್ನ ಜರ್ನಿ ತುಂಬಾ ಸುಂದರವಾಗಿದೆ ಎಂದರು. ‌

ಉಪೇಂದ್ರ ಜೊತೆ ಕಬ್ಜ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಕಬ್ಜ ಸಿನಿಮಾದಲ್ಲಿ ಒಳ್ಳೆ ಪಾತ್ರ ಸಿಕ್ಕಿದ್ದರಿಂದ ಒಪ್ಕೊಂಡಿದ್ದೀನಿ ಎಂದ ಸುದೀಪ್, ಕ್ರಿಕೇಟರ್ ಆಗ್ಲಿಲ್ಲ ಅಂತಾ ಇಂದಿಗೂ ರಿಗ್ರೇಟ್ ಇದೆ ಎಂದು ವಿಷಾದಿಸಿದರು.

ನೆನಪುಗಳ ಮೆಲಕು…….

ರತ್ನ ಕಂಬಳಿ ಹಾಕಿಕೊಂಡೇ ಜೀವನ ಸಾಗಿಸೋಕಾಗಲ್ಲ. ಕಾರ್ ಇದ್ಮೇಲೆ ಪಂಕ್ಚರ್ ಆಗಲೇ ಬೇಕು. ಪಂಕ್ಚರ್ ಆದ ಟೈರ್ ಚೇಂಜ್ ಮಾಡಲೇಬೇಕು. ನಮ್ಮೊಟ್ಟಿಗೆ ಯಾರಿದ್ದಾರೋ ಅವರ ಜೊತೆ ಸಾಗಬೇಕು. ಕೆಲವರು ನೆನಪು ಬಿಟ್ಟು ಹೋಗ್ತಾರೆ, ಕೆಲವರು ನೆನಪು ಕಿತ್ಕೊಂಡ್ ಹೋಗ್ತಾರೆ ಎಂದು ದಾರ್ಶನಿಕರಂತೆ ಮಾತನಾಡಿದರು ಸುದೀಪ್.‌

ಪ್ಯಾನ್ ಇಂಡಿಯಾ ಕಲ್ಪನೆ ಕಲಾವಿದ ಹಾಗೂ ನಿರ್ದೇಶಕನಿಗೆ ಬಿಟ್ಟಿದ್ದು. ಅದು ಅವರವರ ಪ್ಲಾನ್. ಒಂದು ಸಿನಿಮಾ ಪ್ಯಾನ್ ಇಂಡಿಯಾ ಆದ ತಕ್ಷಣ ಉಳಿದದ್ದು ಚಿಕ್ಕ ಸಿನಿಮಾ ಆಗಲ್ಲ. ಫಸ್ಟ್ ಟೈಂ ‌ಫೂಂಕ್​ಗೆ ಕರೆದಾಗ ಭಯ ಇತ್ತು ನನಗೆ ಎಂದೂ ಮೆಲುಕು ಹಾಕಿದರು.

Copyright © All rights reserved Newsnap | Newsever by AF themes.
error: Content is protected !!