ನನಸಾಗದೇ ಉಳಿದ ವಿಜಯನಗರ ಜಿಲ್ಲೆ ಕನಸು

Team Newsnap
1 Min Read

ವಿಜಯನಗರ ಜಿಲ್ಲೆ ಘೋಷಣೆ ಹಾಗೂ ಆನಂದ್ ಸಿಂಗ್ ಅವರನ್ನು ಮಂತ್ರಿ ಮಾಡುವ ಭರವಸೆ ನೀಡಿದ್ದ ಬಿಜೆಪಿ ಒಂದನ್ನು ಮಾತ್ರ ಈಡೇರಿಸಿದೆ. ಸಾರ್ವಜನಿಕರ ಬಹುದಿನದ ಕನಸನ್ನು ಇದುವರೆಗೂ ಭಗ್ನಗೊಳಿಸಿಕೊಂಡೇ ಬಂದಿದೆ.

ವಿಜಯನಗರ ಜಿಲ್ಲೆ ಮಾಡುವ ಭರವಸೆ
ನೀಡಿಕೊಂಡೇ ಶಾಸಕರಾಗಿ ಆಯ್ಕೆಯಾದ ಆನಂದ್ ಸಿಂಗ್ ಈಗ ಮೌನಕ್ಕೆ ಶರಣಾಗಿದ್ದಾರೆ.

ಸುದ್ದಿಗಷ್ಟೇ ಮೀಸಲಾದ ಪ್ರಚಾರ

ಹೊಸ ಪೇಟೆ, ಕಂಪ್ಲಿ, ಹಗರಿ, ಬೊಮ್ಮನ ಹಳ್ಳಿ, ಕೊಟ್ಟೂರು, ಹಡಗಲಿ, ಹರಪನ ಹಳ್ಳಿ, ತಾಲೂಕುಗಳನ್ನು ಸೇರಿಸಿ ರಾಜ್ಯ ಸರ್ಕಾರ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಕರ್ನಾಟಕದ 31 ನೇ ಜಿಲ್ಲೆಯಾಗಿ ವಿಜಯ ನಗರವನ್ನು ಅಧಿಕೃತವಾಗಿ ಘೋಷಣೆ ಮಾಡುತ್ತದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಸಾಕಷ್ಟು ಪ್ರಚಾರವೂ ಆಯ್ತು.

ಸಚಿವ ಸಂಪುಟದ ಮುಂದೆ ವಿಜಯನಗರ ಕ್ಷೇತ್ರ ಮಾಡಲು ಅನುಮೋದನೆ ಇಡಲಾಗಿತ್ತು. ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ನವಂಬರ್1 ಕನ್ನಡ ರಾಜ್ಯೋತ್ಸವದ ದಿನ ಬಳ್ಳಾರಿ ಜಿಲ್ಲೆಯನ್ನು ಬೇರ್ಪಡಿಸಿ ನೂತನ ವಿಜಯನಗರ ಜಿಲ್ಲೆಯಾಗಿ ಮಾಡಿ ಪ್ರಕಟಣೆ ಮಾಡಬಹುದು ಎಂದು ಜನ ಕಾತುರದಿಂದ ಕಾಯುತ್ತಿದ್ದರು. ಆದರೆ ಅದು ಹುಸಿಯಾಗಿದೆ.

ಆನಂದ್ ಸಿಂಗ್ ರವರು ವಿಜಯನಗರ ಕ್ಷೇತ್ರದ ಜನರಿಗೆ ಚುನಾವಣಾ ಸಮಯದಲ್ಲಿ ಪ್ರಥಮ ಆದ್ಯತೆಯಾಗಿ ಆಶ್ವಾಸನೆ ನೀಡಿದ ನೂತನ ವಿಜಯನಗರ ಜಿಲ್ಲೆ ಮಾಡುವ ಕನಸು ನನಸಾಗಲು ಕ್ಷೇತ್ರದ ಜನ ಇನ್ನೂ ಕಾಯಬೇಕಾಗಿದೆ.

ವಿಜಯನಗರ ಜಿಲ್ಲಾ ಹೋರಾಟ ಸಮಿತಿ ,ಕನ್ನಡಪರ ಸಂಘ ಸಂಸ್ಥೆಗಳು ,ರೈತ ಸಮಿತಿ ಮತ್ತು ಸಚಿವರ ವಿಜಯನಗರ ನೂತನ ಜಿಲ್ಲೆಯ ಕನಸು ನನಸಾಗುತ್ತದೆಯೋ ಅಥವಾ ಕನಸಾಗಿಯೇ ಮನಸ್ಸಿನಲ್ಲಿ ಉಳಿಯುತ್ತದೆಯೋ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಮಾಹಿತಿ : ಮುರಳೀಧರ ನಾಡಿಗೇರ್ ಹೊಸಪೇಟೆ
TAGGED:
Share This Article
Leave a comment