“ತಲೈವಾರ್’ ಎಂದು ತಮಿಳು ಚಿತ್ರರಂಗದಲ್ಲಿ ಕರೆಸಿಕೊಂಡಿರುವ ಸೂಪರ್‌ಸ್ಟಾರ್ ರಜನಿಕಾಂತ್ ಪಡೆಯುವ ಸಂಭಾವನೆಗಿಂತ ಹೆಚ್ಚು ಮೊತ್ತವನ್ನು ಮತ್ತೊಬ್ಬ ಜನಪ್ರಿಯ ನಟ ವಿಜಯ್ ಪಡೆಯಲಿದ್ದಾರೆ ಎಂಬ ಸುದ್ದಿ ಜೋರಾಗಿ ಮಾರ್ದನಿಸುತ್ತಿದೆ.
ಈಗಾಗಲೇ ವಿಜಯ್ ಬೀಸ್ಟ್ ಚಿತ್ರಕ್ಕಾಗಿ ರಜನಿ ಪಡೆಯುವ ಮೊತ್ತಕ್ಕಿಂತ 10 ಕೋಟಿ ಜಾಸ್ತಿ ಪಡೆದು ದಾಖಲೆ ನಿರ್ಮಿಸಿದ್ದರೆ, ತಮ್ಮ ಮುಂದಿನ ಚಿತ್ರಕ್ಕೆ ಅದನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ ಎಂದು ಮಾತು ಹರಿದಾಡುತ್ತಿದೆ.

ತೆಲುಗಿನ ಮಹರ್ಷಿ ಸಿನಿಮಾ ನಿರ್ದೇಶಿಸಿದ ವಂಶಿ ಪೈಡಿಪಲ್ಲಿ, ವಿಜಯ್ ಮುಂದಿನ ಚಿತ್ರದ ಕ್ಯಾಪ್ಟನ್. ತಮಿಳು ಮತ್ತು ತೆಲುಗಿನಲ್ಲಿ ತಯಾರಾಗುವ ಈ ಚಿತ್ರಕ್ಕೆ ದಿಲ್ ರಾಜು ಎಂಬುವರು ದಿಲ್‌ದಾರ್ ಆಗಿ ಖರ್ಚುಮಾಡಲಿದ್ದಾರೆ.
ವಿಜಯ್‌ರ 66 ನೇ ಚಿತ್ರ ಇದಾಗಿದ್ದು, ಇದಕ್ಕೆ 120 ಕೋಟಿ ಸಂಭಾವನೆ ಪಡೆಯುವರು ಎಂಬ ಸುದ್ದಿಗೆ ಸಾಕಷ್ಟು ವೇಗ ದೊರೆತಿದೆ.
ಈ ಹಿಂದೆ ದರ್ಬಾರ್ ಚಿತ್ರಕ್ಕೆ ರಜನಿ 90 ಕೋಟಿ ಸಂಭಾವನೆ ಪಡೆದಿದ್ದರಂತೆ. ಆದರೆ ವಿಜಯ್ ಬೀಸ್ಟ್ ಸಿನಿಮಾಕ್ಕೆ 100 ಕೋಟಿ ತೆಗೆದುಕೊಂಡಿದ್ದರೆನ್ನಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್