January 29, 2026

Newsnap Kannada

The World at your finger tips!

fire accident , death , banglore

Fire tragedy in Bangalore - 8 people burned ಬೆಂಗಳೂರಿನಲ್ಲಿ ಅಗ್ನಿ ದುರಂತ - 8 ಮಂದಿ ದಹನ

ಪಶ್ಚಿಮ ಬಂಗಾಳದಲ್ಲಿ 12 ಮನೆಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು; 10 ಮಂದಿ ಸಜೀವ ದಹನ

Spread the love

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕಾರ್ಯಕರ್ತರ ಹತ್ಯೆ ಪ್ರಕರಣಗಳು ತೀವ್ರ ಸ್ವರೂಪ ಪಡೆದುಕೊಂಡಿವೆ
ಕಳೆದ ರಾತ್ರಿ ನಡೆದ ಹಿಂಸಾಚಾರದಲ್ಲಿ 10 ಮಂದಿ ಸಜೀವ ದಹನಗೊಂಡ ಘಟನೆ ವರದಿಯಾಗಿದೆ.

ಬಿರ್ಭುಮ್ ಜಿಲ್ಲೆಯ ರಾಂಪುರ ಹತ್‌ನ ಬಾಗುತಿ ಗ್ರಾಮದ ಪಂಚಾಯತ್‌ ಉಪಾಧ್ಯಕ್ಷ ಭದು ಶೇಖ್‌ ಹತ್ಯೆ ಬಳಿಕ ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿದೆ. ಭದು ಶೇಖ್‌, ಟಿಎಂಸಿ ಕಾ ರ್ಯಕರ್ತನಾಗಿದ್ದ ಎಂದು ತಿಳಿದುಬಂದಿದೆ.

ಕಳೆದ ರಾತ್ರಿ ಭದು ಅಭಿಮಾನಿಗಳು ಸುಮಾರು 10 ರಿಂದ 12 ಮನೆಗಳಿಗೆ ಬೆಂಕಿಯಿಟ್ಟು ಪೈಶಾಚಿಕ ಕೃತ್ಯ ಮೆರೆದಿದ್ದಾರೆ. ಪರಿಣಾಮ 10 ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ.


ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಜನ ಉದ್ರಿಕ್ತರ ಗುಂಪು ಸುಮಾರು 1 ಡಜನ್ ಮನೆಗಳಿಗೆ ಬೆಂಕಿಯಿಟ್ಟಿದೆ. ಈ ಬಗ್ಗೆ ಯಾರೋ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು, ಬೆಂಕಿಯನ್ನು ನಂದಿಸಿದ್ದಾರೆ. ಆಘಾತಕಾರಿ ವಿಷಯ ಏನಂದರೆ ಒಂದೇ ಮನೆಯಲ್ಲಿ 7 ಮಂದಿಯ ಮೃತದೇಹ ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 11 ಜನರನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

error: Content is protected !!