December 23, 2024

Newsnap Kannada

The World at your finger tips!

WhatsApp Image 2023 01 08 at 11.26.47 AM

Veteran journalist K. Satyanarayan is no more ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಇನ್ನಿಲ್ಲ

ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಇನ್ನಿಲ್ಲ

Spread the love

ಕನ್ನಡದ ಹಿರಿಯ ಪತ್ರಕರ್ತ ಕೆ. ಸತ್ಯನಾರಾಯಣ ಅವರು ಭಾನುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.

ಕನ್ನಡಪ್ರಭ ಪತ್ರಿಕೆಯ ಮಾಜಿ ಸಂಪಾದಕ ಕೆ. ಸತ್ಯನಾರಾಯಣ ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದರು ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಸುಧೀರ್ಘ ಅವಧಿಗೆ ನಾನಾ ಹಂತದಲ್ಲಿ ದುಡಿದಿದ್ದಾರೆ. ತಮ್ಮ ಬದುಕನ್ನು ಸುದ್ದಿ ಮನೆಗೆ ಸಮರ್ಪಣೆ ಮಾಡಿದ ಹಿರಿಯ ಚೇತನ. ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಾ ತಮ್ಮೊಳಗಿನ ಪತ್ರಕರ್ತನನ್ನು ಜಾಗೃತವಾಗಿ ಕಾಪಿಟ್ಟುಕೊಂಡಿದ್ದರು.

ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುಲಲಿತ, ಸರಳವಾಗಿ ಬರೆಯುತ್ತಿದ್ದ ಅವರು ವಾಣಿಜ್ಯ, ವ್ಯವಹಾರ ವರದಿಗಾರಿಕೆಯಲ್ಲಿ ಪರಿಣಿತರಾಗಿದ್ದರು. ಬಜೆಟ್ ವರದಿಗಾರಿಕೆಯಲ್ಲಿ ಸತ್ಯನಾರಾಯಣ ಎತ್ತಿದ ಕೈ. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿಯೂ ವರದಿಗಾರರಾಗಿ ಕೆಲಸ ಮಾಡಿದ್ರು. ಕನ್ನಡಪ್ರಭದಲ್ಲಿ ನಗರಪ್ರದಕ್ಷಣೆ, ವ್ಯಕ್ತಿ ವಿಚಾರ ಎಂಬ ಅಂಕಣ ಬರೆಯುತ್ತ ಜನಮನ ಗೆದ್ದಿದ್ದರು.

ಜಯನಗರದ ಅದೇ ರೆಡ್ ಆಕ್ಸೈಡ್ ನೆಲವಿರುವ ಮನೆಯಲ್ಲಿ ವಾಸವಿದ್ದ ಅವರು ಆದರ್ಶ ಜೀವನ ನಡೆಸುತ್ತಿದ್ದರು.

ಇಳಿವಯಸ್ಸಿನಲ್ಲೂ ವೆಂಕಮ್ಮ, ಸತ್ಯನಾರಾಯಣ ದಂಪತಿ ಸರಳ ಸಜ್ಜನಿಕೆಯಲ್ಲಿ ಆದರ್ಶಪ್ರಾಯವಾದ ಬದುಕು ಬದುಕುತ್ತಿದ್ದರು. ಕನ್ನಡದ ಹಲವು ಹೆಸರಾಂತ ಪತ್ರಕರ್ತರನ್ನು ಸತ್ಯನಾರಾಯಣ ಅವರು ಬೆಳೆಸಿದ್ದರು.

ಸತ್ಯನಾರಾಯಣ ಅವರ ಮನೆಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪತ್ನಿ ವೆಂಕಮ್ಮ, ಮಗಳು ಅಪೂರ್ವರನ್ನು ಅಗಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!