September 21, 2021

Newsnap Kannada

The World at your finger tips!

ವರ್ತಿಕಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ – ಪತಿ ನಿತೀನ್ ಸುಭಾಷ್ ರಿಂದ ಸಿಎಸ್ ಗೆ ದೂರು

Spread the love

ಐಎಎಸ್ ಅಧಿಕಾರಿ ಅನುರಾಗ ತಿವಾರಿ ಸಾವಿನ ಹಿಂದೆ ತಮ್ಮ ಪತ್ನಿ, ಐಪಿಎಸ್‌ ಅಧಿಕಾರಿ ವರ್ತಿಕಾ ಕಟಿಯಾರ್ ಕೈವಾಡ ಇದೆ ಎಂದು ಐಎಫ್‌ಎಸ್ ಅಧಿಕಾರಿ ನಿತೀನ್ ಸುಭಾಶ್ ಗಂಭೀರ ಆರೋಪ ಮಾಡಿ, ಈ ಸಂಬಂಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ವರ್ತಿಕಾ ಕಟಿಯಾರ್‌ ಹಾಗೂ ಅವರ ಪತಿ ಐಎಫ್‌ಎಸ್‌ ಅಧಿಕಾರಿ ನಿತೀನ್‌ ಸುಭಾಶ್‌ ನಡುವಿನ ಕೌಟುಂಬಿಕ ಕಲಹ ತಾರಕಕ್ಕೇರಿದೆ.

ರಾಜ್ಯದ ಮುಖ್ಯಕಾರ್ಯದರ್ಶಿ ರವಿಕುಮಾರ್‌ ಅವರಿಗೆ ಪತ್ರ ಬರೆದು ಪತ್ನಿ ವರ್ತಿಕಾ ಕಟಿಯಾರ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಬೇರೊಬ್ಬನ ಜೊತೆ ಅವರು ಓಡಾಟ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಅಯಾಜ್ ಖಾನ್ ಎಂಬುವನ ಜೊತೆ ಕೆಸಿನೊ ಸೇರಿದಂತೆ ಬೇರೆ ಬೇರೆ ಕಡೆ ಓಡಾಡುತ್ತಿದ್ದಾರೆ. ಶ್ರೀಲಂಕಾ, ಅಫ್ಘಾನಿಸ್ತಾನ, ಸ್ವಿಟ್ಜರ್‌ಲ್ಯಾಂಡ್‌, ಆಸ್ಟ್ರೀಯಾ, ಇಟಲಿ ಸೇರಿದಂತೆ ವಿವಿಧ ದೇಶಗಳಿಗೆ ಜೊತೆಯಲ್ಲಿ ಓಡಾಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಅನುರಾಗ್ ಸಾವು ಪ್ರಕರಣದಲ್ಲಿ ಆಕೆಯ ವಿರುದ್ಧ ಕ್ರಮ ಜರುಗಿಸಬೇಕೆಂದು ಪತ್ರದಲ್ಲಿ ನಿತೀನ್‌ ಸುಭಾಶ್‌ ಮನವಿ ಮಾಡಿದ್ದಾರೆ.

error: Content is protected !!