November 19, 2024

Newsnap Kannada

The World at your finger tips!

WhatsApp Image 2022 11 02 at 8.25.23 AM

ಜೆಡಿಎಸ್ ಪಂಚರತ್ನಕ್ಕೆ ವರುಣ ಅಡ್ಡಿ : ಒಂದು ವಾರ ಬ್ರೇಕ್- ಮಳೆ ಬಿಡುವು ನೀಡಿದ ಮೇಲೆ ಯಾತ್ರೆಗೆ ಚಾಲನೆ

Spread the love

ಪಂಚರತ್ನ ಯಾತ್ರೆ ಮೂಲಕ ರಾಜ್ಯಾದ್ಯಂತ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಬೇಕು. ತಾವು ಮತ್ತೊಮ್ಮೆ ಸಿಎಂ ಗಾದಿಗೇರಲು ಫಿನಿಕ್ಸ್​ನಂತೆ ಮೇಲೆ ಬರಲು ದಳಪತಿಗಳು ಶತಾಯಗತಾಯವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದ ಅಂಗವಾಗಿ ತೆನೆ ಹೊತ್ತ ಮಹಿಳೆಯನ್ನು ರಾಜ್ಯದ ಸಿಂಹಾಸನವೇರುವಂತೆ ಮಾಡುವ ಹಂತದ ಮತ್ತೊಂದು ಹೆಜ್ಜೆಯೇ ಪಂಚರತ್ನ ರಥಯಾತ್ರೆ.

ನಿನ್ನೆ ಪಂಚರತ್ನ ರಥಯಾತ್ರೆಗೆ ಚಾಲನೆ ಕೊಡ್ತಿದ್ದಂತೆ ಇತ್ತ ವರುಣ ಪ್ರವೇಶ ಕೊಟ್ಟ ಪರಿಣಾಮ ರ್ಯಾಲಿಯನ್ನು ಒಂದು ವಾರ ಮುಂದೂಡಲಾಗಿದೆ.

ಈ ಬಗ್ಗೆ ಮುಳಬಾಗಿಲುನಲ್ಲಿ ಮಾತನಾಡಿದ ಹೆಚ್​ಡಿಕೆ, ಉಚಿತ ಚಿಕಿತ್ಸೆ, ಶಿಕ್ಷಣ, ವಸತಿ, ರೈತ ಚೈತನ್ಯ, ಮಹಿಳಾ ಸಬಲೀಕರಣ ಕಾರ್ಯಕ್ರಮ ಮಾಡಲಾಗುತ್ತಿದೆ. ಮಳೆ ಆಗಮಿಸಿದ್ದರಿಂದ ಯಾತ್ರೆ ಮೂಂದೂಡಿದ್ದು ವರುಣನ ಸಿಂಚನ ಮೂಲಕ ಪಂಚರತ್ನಕ್ಕೆ ಶುಭ ಸೂಚನೆ ಸಿಕ್ಕಿದೆ. ಮುಳಬಾಗಿಲಿನಿಂದಲೇ ಮತ್ತೆ ರಥಯಾತ್ರೆಗೆ ಚಾಲನೆ ನೀಡುತ್ತೇವೆ ಅಂತ ಹೇಳಿದ್ದಾರೆ. ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಭಾವುಕರಾಗಿ ಸ್ವೀಕರಿಸಿದ ಪುನೀತ್ ಪತ್ನಿ ಅಶ್ವಿನಿ

ಜೆಡಿಎಸ್‌ನ ಪಂಚರತ್ನ ರಥಯಾತ್ರೆಗೆ ಚಾಲನೆ ಜೆಡಿಎಸ್​ನ ಮಹಾತ್ವಾಕಾಂಕ್ಷಿ ಯಾತ್ರೆ ಪಂಚರತ್ನಕ್ಕೆ ನಿನ್ನೆ ದಳಪತಿಗಳು ಚಾಲನೆ ಕೊಟ್ಟಿದ್ದಾರೆ. ಕೋಲಾರ‌ದ ಕುರುಡುಮಲೆಯಿಂದ ರ್ಯಾಲಿ ಕುರುಡುಮಲೆ ಗಣಪತಿ ದೇವಾಲಯದಲ್ಲಿ ರಥಯಾತ್ರೆ ಯಶಸ್ವಿಗಾಗಿ ವಿಶೇಷ ಪೂಜೆ, ಹೋಮ‌-ಹವನ ನೆರವೇರಿಸಿ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ ವಿದ್ಯುಕ್ತ ಚಾಲನೆ‌ ನೀಡಿದ್ದಾರೆ. ಈ ವೇಳೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್​ನ ಹಲವು ನಾಯಕರು ಭಾಗಿಯಾಗಿದ್ದರು.

Copyright © All rights reserved Newsnap | Newsever by AF themes.
error: Content is protected !!