ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣದ ತನಿಖೆ ಮುಂದುವರೆದಂತೆ ಕ್ಷಣ ಕ್ಷಣಕ್ಕೂ ಬಿಗ್ ಟ್ವಿಸ್ಟ್ ಸಿಗುತ್ತಾ ಇದೆ.ಬೆಂಗಳೂರಿನ ಬೆಳ್ಳಂದೂರು ಬಳಿ ಪತ್ತೆಯಾದ ಕಾರಿನ ಯಾವುದೇ ಡೋರ್ ಗಳ ಗ್ಲಾಸ್ ಒಡೆದಿಲ್ಲ. ಜೊತೆಗೆ ಯುವತಿಯೊಬ್ಬಳ ವೇಲ್ ( ದುಪ್ಪಟ್ಟ) ಪತ್ತೆ ಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಈ ಕಾರಣಕ್ಕಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಅನುಮಾನಗಳು ತನಿಖಾ ಅಧಿಕಾರಿಗಳನ್ನು ಕಾಡುತ್ತಿವೆ.
ನವೆಂಬರ್ 25ರಂದು ಅಪಹರಣಕ್ಕೀಡಾಗಿದ್ದ ವರ್ತೂರು ಪ್ರಕಾಶ್, ವಾರದ ಬಳಿಕ ಬೆಂಗಳೂರಿನಲ್ಲಿ ಬಂದು ದೂರು ದಾಖಲಿಸುತ್ತಾರೆ. ಇದೂ ಕೂಡಾ ಹಲವು ಶಂಕೆಗೆ ಕಾರಣವಾಗಿದೆ. ಅಲ್ಲದೇ ವರ್ತೂರು ಪ್ರಕಾಶ್ ಕಾರು ಬೆಂಗಳೂರಿನ ಬೆಳ್ಳಂದೂರು ಬಳಿ ನಿನ್ನೆ ಪತ್ತೆ ಪತ್ತೆಯಾಗಿದೆ.
ಇದೀಗ ಆ ಕಾರಿನಲ್ಲಿ ಯುವತಿಯ ದುಪ್ಪಟ್ಟ ಮಾದರಿಯ ಬಟ್ಟೆ ಸಿಕ್ಕಿರುವುದು ಇನ್ನಷ್ಟು ಅನುಮಾನ ಗಳನ್ನು ಹೆಚ್ಚಿಸಿದೆ.ವರ್ತೂರು ಪ್ರಕಾಶ್ ಹೇಳಿರುವ ಪ್ರಕಾರ, ಕಾರನ್ನು ಅಡ್ಡಗಟ್ಟಿ ಕಾರಿನ ಗಾಜು ಒಡೆದು, ಹಲ್ಲೆ ನಡೆಸಿ, ತನಗೆ ಮಂಕಿ ಕ್ಯಾಪ್ ಹಾಕಿ ಕಿಡ್ನ್ಯಾಪ್ ಮಾಡಿದ್ದಾರೆ ಎಂದಿದ್ದರು.
ಆದರೆ ಪತ್ತೆಯಾಗಿರುವ ಕಾರಿನ ಯಾವುದೇ ಗಾಜು ಒಡೆದಿಲ್ಲ ಎನ್ನಲಾಗಿದೆ. ಇದೇ ವೇಳೆ ಕಾರಿನಲ್ಲಿ ವೇಲ್ ಮಾದರಿಯ ಬಟ್ಟೆ ಸಿಕ್ಕಿರುವುದು ವರ್ತೂರು ಅವರನ್ನು ಹನಿ ಟ್ರ್ಯಾಪ್ ಮೂಲಕ ಬಲೆಗೆ ಕೆಡವಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆ ಎಂಬ ಶಂಕೆ ಮೂಡಿದೆ. ಕಿಡ್ನ್ಯಾಪ್ ಪ್ರಕರಣದ ಸುತ್ತ ಅನುಮಾನಗಳ ಹುತ್ತ ಆರಂಭವಾಗಿದೆ. ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಗೊತ್ತಾಗಲಿದೆ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ