ಆಷಾಡಕ್ಕೆ ಬಂದ ನವವಧು ಪ್ರಿಯಕರನೊಂದಿಗೆ ಎಸ್ಕೇಪ್-ವಾಪಸ್ ಕರೆತಂದಿದ್ದಕ್ಕೆ ವರ್ಷಿತಾ ಆತ್ಮಹತ್ಯೆಗೆ ಶರಣು

varshitha

ನವ ವಧು ಆಷಾಢ ಮಾಸಕ್ಕಾಗಿ ತವರು ಮನೆಗೆ ಬಂದವಳು ಪಕ್ಕದ ಮನೆಯಲ್ಲಿದ್ದ ಪ್ರಿಯಕರನ ಜೊತೆ ಪರಾರಿಯಾದ ನಂತರ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡ ಪೊಲೀಸರು ಒಂದು ವಾರದಲ್ಲಿ ಪತ್ತೆ ಮಾಡಿ ಪ್ರಿಯಕರನಿಂದ ಬೇರ್ಪಡಿಸಿದ್ದರು.

ಪ್ರಿಯಕರನಿಂದ ದೂರವಾದರಿಂದ ಮನನೊಂದ ನವವಧು ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕು ರಾಂಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ವರ್ಷಿತಾ(20) ಮೃತ ನವವಧು. ವರ್ಷಿತಾ ತನ್ನ ಮನೆಯ ಪಕ್ಕದಲ್ಲಿದ್ದ ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು.

ಮಗಳ ಮನ ಒಲಿಸಿ ಚಾಮರಾಜನಗರದ ಯುವಕನೊಂದಿಗೆ ಕಳೆದ ಮೇ 8 ರಂದು ಅದ್ದೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ಆಷಾಢ ಮಾಸ ಹಿನ್ನಲೆ ವರ್ಷಿತಾ ತವರು ಮನಗೆ ಆಗಮಿಸಿದ್ದಳು. ಈ ವೇಳೆ ಪಕ್ಕದ ಮನೆಯಲ್ಲಿದ್ದ ಪ್ರಿಯತಮ ಕಿರಣ್ ಜೊತೆ ಮನೆ ಬಿಟ್ಟು ವರ್ಷಿತಾ ಪರಾರಿಯಾಗಿದ್ದಳು.

ವರ್ಷಿತಾ ಕಾಣೆಯಾದ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರೇಮಿಗಳು ಬೆಂಗಳೂರಿನಲ್ಲಿ ಇದ್ದರು, ನಂತರ ವಾಪಸ್ ಕರೆತಂದ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಅವರ ಮನೆಗೆ ಕಳುಹಿಸಿದ್ದರು.

ಬಳಿಕ ವರ್ಷಿತಾ ಮೈಸೂರಿನಲ್ಲಿದ್ದ ಸಂಬಂಧಿಕರ ಮನೆಗೆ ಬಂದು 3 ದಿನ ಸಮಯ ಕಳೆದು, ನಂತರ ರಾಂಪುರ ಗ್ರಾಮದಲ್ಲಿರುವ ತನ್ನ ತಾತನ ಮನೆಗೆ ಬಂದಿದ್ದಳು ಎನ್ನಲಾಗಿದೆ. ಪ್ರಿಯಕರ ದೂರವಾಗಿದ್ದರಿಂದ ಮನನೊಂದಿದ್ದ ವರ್ಷಿತಾ ತಾತನ ಮನೆಯ ವಾಶ್ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

error: Content is protected !!