ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ: ರೌಡಿಶೀಟರ್ ಲೋಹಿತ್​​ ಕಾಲಿಗೆ ಪೋಲಿಸರ ಗುಂಡೇಟು

Team Newsnap
1 Min Read

ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಆರೋಪಿ ರೌಡಿಶೀಟರ್ ಲೋಹಿತ್​​ ಪೋಲಿಸರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಕಾಲಿಗೆ ಗುಂಡಿಟ್ಟು ಗಾಯಗೊಳಿಸಿದ್ದ ಘಟನೆ ಶನಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಜರುಗಿದೆ

ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದ ಜೆ.ಬಿ.ನಗರ ಠಾಣೆ ವ್ಯಾಪ್ತಿಯ ಚಲ್ಲಘಟ್ಟ ಲೋಹಿತ್ ಅಲಿಯಾಸ್ ರೋಹಿತ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಹೆಚ್.ಎಸ್.ಆರ್. ಲೇಔಟ್ ಮತ್ತು ಬನ್ನೇರುಘಟ್ಟ ಠಾಣೆಯ ರೌಡಿಶೀಟರ್ ಆಗಿರೋ ಲೋಹಿತ್ ಅಲಿಯಾಸ್ ರೋಹಿತ್ ವಿರುದ್ಧ ರಾಬರಿ, ಅಪಹರಣ, ಕೊಲೆ, ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ.

ಅಲ್ಲದೇ ಕೋಲಾರ ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು ಈ ಹಿಂದೆ ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಇಂದಿರಾನಗರ ಪೊಲೀಸರು ಆರೋಪಿ ಕವಿರಾಜ್ ನನ್ನ ಬಂಧಿಸಿದ್ದರು.

ಜೆಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಲ್ಲಘಟ್ಟ ಆರೋಪಿ ಲೋಹಿತ್ ಇರೋ ಬಗ್ಗೆ ಮಾಹಿತಿ ಲಭಿಸಿದ್ದ ಕಾರಣ ಇಂದಿರಾನಗರ ಠಾಣೆ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು.

ಈ ವೇಳೆ ಹೆಡ್ ಕಾನ್ಸ್ ಸ್ಟೇಬಲ್ ಸೈಯದ್ ಮೊಯೀನುಲ್ಲಾ ಹೆಚ್.ಸಿ ಅವರ ಮೇಲೆ ಆರೋಪಿ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ

ಆತ್ಮರಕ್ಷಣೆಗಾಗಿ ಪಿಐ ಹರೀಶ್ ಮೊದಲು ಗುಂಡು ಶರಣಾಗುವಂತೆ ಹೇಳಿ ಗಾಳಿಯಲ್ಲಿ ಪೈರ್​ ಮಾಡಿದ್ದಾರೆ. ಆದರೂ ಆರೋಪಿ ಹಲ್ಲೆ ಮುಂದಾದ ವೇಳೆ ಇಂದಿರಾನಗರ ಠಾಣೆ ಪಿಎಸ್ಐ ಅಮರೇಶ್ ಜೇಗರಕಲ್ ರೌಡಿ ಬಲಗಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

Share This Article
Leave a comment