July 7, 2022

Newsnap Kannada

The World at your finger tips!

WhatsApp Image 2022 05 27 at 8.42.05 PM

ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ನೇಮಕ

Spread the love

ಕರ್ನಾಟಕದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಈವರೆಗೆ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಿ.ರವಿಕುಮಾರ್ ಅವರು ನಿವೃತ್ತರಾಗಿದ್ದು ಅವರ ಸ್ಥಾನಕ್ಕೆ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.ವಂದಿತಾ ಶರ್ಮ ಅವರು ಮೇ 31 ರಂದು CS ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇದನ್ನು ಓದಿ :ಕಾಶ್ಮೀರದಲ್ಲಿ ನದಿಗೆ ಉರುಳಿದ ಸೇನಾ ವಾಹನ – ಹುತಾತ್ಮರಾದ 7 ಮಂದಿ ಯೋಧರು : 19 ಮಂದಿಗೆ ಗಾಯ

1986 ರ ಕರ್ನಾಟಕ ಕೇಡರ್ IAS ಅಧಿಕಾರಿಯಾಗಿರುವ ವಂದಿತಾ ಶರ್ಮಾ ಅವರು 1996- 97 ರ ಅವಧಿಯಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದರು.

WhatsApp Image 2022 05 27 at 8.34.37 PM

4 ನೇ ಮಹಿಳಾ ಮುಖ್ಯಕಾರ್ಯದರ್ಶಿ

ವಂದಿತಾ ಶರ್ಮಾ ರಾಜ್ಯದ 4 ನೇ ಮುಖ್ಯ ಮಹಿಳಾ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ,ಈ ಮೊದಲು ಮಾಲತಿ ದಾಸ್, ತೆರೆಸಾ ಭಟ್ಟಾಚಾರ್ಯ, ಹಾಗೂ ರತ್ನಪ್ರಭ ಅವರು ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

error: Content is protected !!