January 9, 2025

Newsnap Kannada

The World at your finger tips!

01 Why Are Roses So Popular For Valentines Day 528431108 nattavutluechai

ಕೆ ಆರ್ ಪೇಟೆ ಬಸ್ ನಿಲ್ದಾಣದಲ್ಲಿ ಪರಸ್ಪರ ಚುಂಬಿಸಿದ ಪ್ರೇಮಿಗಳು

Spread the love

ಪ್ರೇಮಿಗಳ ದಿನಕ್ಕೆ ಇನ್ನೂ ಮೂರು ದಿನ ಬಾಕಿ ಇದೆ. ಪ್ರೇಮಿಗಳ ಸಂಭ್ರಮ ಆಗಲೇ ಆರಂಭವಾಗಿದೆ. ಹಿಂದಿನ ಕಾಲದಲ್ಲಿ ಕದ್ದು ಮುಚ್ಚಿ ನಡೆಯುತ್ತಿದ್ದ ಸಲ್ಲಾಪಗಳು ಬಸ್ ನಿಲ್ದಾಣದವರೆಗೂ ಬಂದಿವೆ.

ಪ್ರೇಮಿಗಳು ಸಾರ್ವಜನಿಕವಾಗಿ ಚುಂಬಿಸುವುದು ವಿದೇಶಿ ಸಂಸ್ಕೃತಿ ಎಂದು ಕೊಂಡಿದ್ದೆವು. ಆದರೆ
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಯುವಕ – ಯುವತಿಯೊಬ್ಬಳು ಬಸ್ ನಿಲ್ದಾಣದಲ್ಲೇ ಯಾವ ಎಗ್ಗೂ ಇಲ್ಲದೆ ಪರಸ್ಪರ ಮುತ್ತಿಟ್ಟು ಕೊಂಡು ಸಾರ್ವಜನಿಕರು ತಲೆತಗ್ಗಿಸುವಂತೆ ಮಾಡಿದ್ದಾರೆ.

ಕೆ ಆರ್ ಪೇಟೆ ಬಸ್ ನಿಲ್ದಾಣದಲ್ಲಿ ನೂರಾರು ಜನರ ಮುಂದೆಯೇ ಈ ಇಬ್ಬರು ಪ್ರೇಮಿಗಳು ಕೇರ್ ಮಾಡಿಲ್ಲ.
ಜನರೆಲ್ಲರೂ ನೋಡುತ್ತಿದ್ದಾರೆಂಬ ಭಯ, ನಾಚಿಕೆ ಇಲ್ಲದೆ, ಮುತ್ತಿನ ಮತ್ತಿನಲ್ಲಿ ತೇಲಾಡಿದ್ದಾರೆ.

ಈಗ ಪ್ರೇಮಿಗಳಿಬ್ಬರ ಚುಂಬನದ ದೃಷ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

7ec9f553 e136 4006 b744 06a3920faa1b

ಆ ಹುಡುಗ, ಹುಡುಗಿಗೆ ಬುದ್ಧಿ ಇದೆ, ಇಲ್ಲ ಎಂಬುದು ಬೇರೆ ಮಾತು. ಮನೆಯವರಿಗೆ ಏನಾದರೂ ಈ ವಿಡಿಯೋ ನೋಡಿದರೆ ಗತಿ ಏನು ಎಂಬ ನಾಚಿಕೆ, ಭಯ ಇಲ್ಲದೆ ಚುಂಬನಕ್ಕೆ ಆ ಯುವತಿ ಕೂಡ ಸಹಕಾರ ನೀಡಿದ್ದಾಳೆ. ಮುಂದೆ ರಾದ್ದಾಂತ ಏನಾಗುತ್ತದೆಯೋ‌ ಕಾದು ನೋಡಬೇಕು.

Copyright © All rights reserved Newsnap | Newsever by AF themes.
error: Content is protected !!