ಉತ್ತರಾಖಂಡ್ ಹಿಮ ಪ್ರವಾಹ: 3 ಮೃತದೇಹಗಳು ಪತ್ತೆ, ನೂರಾರು ಜನರು ಕಣ್ಮರೆ

Team Newsnap
1 Min Read

ಉತ್ತರಾಖಂಡ್​​ನ ಚಮೋಲಿ ಜಿಲ್ಲೆಯಲ್ಲಿ ಹಿಮದ ಬಂಡೆ ಕುಸಿದು ಋಷಿಗಂಗಾ ಹೈಡ್ರೋ ಪವರ್​ ಪ್ರಾಜೆಕ್ಟ್​ಗೆ ಹಾನಿಯಾಗಿದೆ.
ಅಲಕಾನಂದ ನದಿಯ ಹರಿವು ಹೆಚ್ಚಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಪವರ್ ಪ್ರಾಜೆಕ್ಟ್ ನಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಿದ್ದರು.‌ ಘಟನೆಯಲ್ಲಿ ಈವರೆಗೆ ಮೂವರ ಮೃತದೇಹಗಳು ಪತ್ತೆಯಾಗಿವೆ.

100 ರಿಂದ 150ಕ್ಕೂ ಹೆಚ್ಚು ಕಾರ್ಮಿಕರು ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ.

ತಪೋವನದಲ್ಲಿ ಹಿಮದ ಬಂಡೆಯ ಒಂದು ಭಾಗ ಬೆಟ್ಟದಿಂದ ಮುರಿದು ಋಷಿಗಂಗಾ ಹೈಡ್ರೋ ಪವರ್​ ಪ್ರಾಜೆಕ್ಟ್​ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಪರಿಣಾಮ ಅಲಕಾನಂದ ನದಿಯ ಹರಿವು ಹೆಚ್ಚಾಗಿದೆ. ಇದರಿಂದಾಗಿ ನೆರೆಹೊರೆಯ ರಾಜ್ಯಗಳಿಗೂ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಕ್ಷಣಾ ಪಡೆಗಳನ್ನು ಉತ್ತರಾಖಂಡ್​ಗೆ ಕಳುಹಿಸಲಾಗಿದೆ ಎಂದು ಸರ್ಕಾರ ಹೇಳಿದೆ.

Share This Article
Leave a comment