ಕೇವಲ 4 ತಿಂಗಳಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಉತ್ತರಾಖಂಡ್​​​ ಸಿಎಂ ರಾವತ್

Team Newsnap
1 Min Read

ಕೇವಲ 4 ತಿಂಗಳಲ್ಲಿ ತೀರಥ್ ಸಿಂಗ್ ರಾವತ್ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಉತ್ತರಾಖಂಡ್​​​ನ​​ಲ್ಲಿ ನಾಯಕತ್ವ ಬಿಕ್ಕಟ್ಟು ಉಲ್ಬಣ ಆಗಿದೆ.

ಸಿಎಂ ಆಗಲು ಶಾಸಕರಾಗಿರಬೇಕು, ಪ್ರಸ್ತುತ ಸಂಸದರಾಗಿರುವ ರಾವತ್‌ ಸಿಎಂ ಗದ್ದುಗೆಯಲ್ಲಿ ಮುಂದುವರಿಯಲು ಸೆಪ್ಟೆಂಬರ್ 10ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕಾಗಿದೆ.

ಆದರೆ ಕೊರೊನಾದಿಂದಾಗಿ ಗಂಗೋತ್ರಿ ಮತ್ತು ಹಲ್ದವಾನಿ ಕ್ಷೇತ್ರಗಳ ಉಪ ಚುನಾವಣೆಯನ್ನು ಚುನಾವಣೆ ಆಯೋಗ ಮುಂದೂಡಿರುವುದು, ತೀರಥ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ.

ಒಂದು ವೇಳೆ ಉಪಚುನಾವಣೆ ನಡೆಯದಿದ್ದರೆ ಬಿಜೆಪಿ ಹೈಕಮಾಂಡ್​​ಗೂ ನಾಯಕತ್ವ ಬದಲಾವಣೆ ಅನಿವಾರ್ಯವಾಗಲಿದ್ದು, ಶಾಸಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ. 

ಇಂದು ಡೆಹ್ರಾಡೂನ್​​ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ, ಮುಂದಿನ ಸಿಎಂ ಆಯ್ಕೆ ಕೂಡ ನಡೆಯಲಿದೆ.‌

Share This Article
Leave a comment