ಕೇವಲ 4 ತಿಂಗಳಲ್ಲಿ ತೀರಥ್ ಸಿಂಗ್ ರಾವತ್ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಉತ್ತರಾಖಂಡ್ನಲ್ಲಿ ನಾಯಕತ್ವ ಬಿಕ್ಕಟ್ಟು ಉಲ್ಬಣ ಆಗಿದೆ.
ಸಿಎಂ ಆಗಲು ಶಾಸಕರಾಗಿರಬೇಕು, ಪ್ರಸ್ತುತ ಸಂಸದರಾಗಿರುವ ರಾವತ್ ಸಿಎಂ ಗದ್ದುಗೆಯಲ್ಲಿ ಮುಂದುವರಿಯಲು ಸೆಪ್ಟೆಂಬರ್ 10ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕಾಗಿದೆ.
ಆದರೆ ಕೊರೊನಾದಿಂದಾಗಿ ಗಂಗೋತ್ರಿ ಮತ್ತು ಹಲ್ದವಾನಿ ಕ್ಷೇತ್ರಗಳ ಉಪ ಚುನಾವಣೆಯನ್ನು ಚುನಾವಣೆ ಆಯೋಗ ಮುಂದೂಡಿರುವುದು, ತೀರಥ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ.
ಒಂದು ವೇಳೆ ಉಪಚುನಾವಣೆ ನಡೆಯದಿದ್ದರೆ ಬಿಜೆಪಿ ಹೈಕಮಾಂಡ್ಗೂ ನಾಯಕತ್ವ ಬದಲಾವಣೆ ಅನಿವಾರ್ಯವಾಗಲಿದ್ದು, ಶಾಸಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ.
ಇಂದು ಡೆಹ್ರಾಡೂನ್ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ, ಮುಂದಿನ ಸಿಎಂ ಆಯ್ಕೆ ಕೂಡ ನಡೆಯಲಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ