ಯು.ಟಿ ಖಾದರ್ ನೂತನ ಸ್ಪೀಕರ್ – ಸರ್ವಾನುಮತದ ಆಯ್ಕೆ

Team Newsnap
1 Min Read
UT Khader is the new Speaker - Unanimous choice ಯು.ಟಿ ಖಾದರ್ ನೂತನ ಸ್ಪೀಕರ್ - ಸರ್ವಾನುಮತದ ಆಯ್ಕೆ

ಬೆಂಗಳೂರು : ರಾಜ್ಯ ವಿಧಾನ ಸಭೆಯ ನೂತನ ಸ್ಪೀಕರ್ ಆಗಿ ಶಾಸಕ ಯು.ಟಿ ಖಾದರ್ ಆಯ್ಕೆಯಾಗಿದ್ದಾರೆ.

ಇಂದು ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ನೂತನ ಸಭಾಧ್ಯಕ್ಷರ ಆಯ್ಕೆಗಾಗಿ ಪ್ರಕ್ರಿಯೆಗಳು ನಡೆಯಿತು.

ಈ ವೇಳೆ ಸರ್ವಾನುಮತದಿಂದ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆ ಮಾಡಲಾಗಿದೆ.

ನೂತನ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆಯಾಗುತ್ತಿದ್ದಂತೆ, ಹಂಗಾಮಿ ಸ್ಪೀಕರ್ ಆಗಿದ್ದಂತ ಆರ್ ವಿ ದೇಶಪಾಂಡೆ ಅವರು ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು.ಪಠ್ಯಪುಸ್ತಕ ಪರಿಷ್ಕರಣೆ : ಸಿಎಂ ಸಿದ್ದರಾಮಯ್ಯ ಮಾಹಿತಿ

ಇದೇ ಸಂದರ್ಭದಲ್ಲಿ ನೂತನ ಸ್ಪೀಕರ್ ಆಗಿ ಆಯ್ಕೆಯಾದಂತ ಯು.ಟಿ ಖಾದರ್ ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ವಿವಿಧ ಸದನದ ಸದಸ್ಯರು ಶುಭಾಶಯಗಳನ್ನು ಕೋರಿದರು.

Share This Article
Leave a comment