ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ : ಟಾಪ್ 4 ಸ್ಥಾನ ಯುವತಿಯರ ಪಾಲು – ರಾಜ್ಯದ 25 ಮಂದಿ ಪಾಸ್

Team Newsnap
1 Min Read
UPSC Exam Result Announced: Top 4 Positions Go To Young Women - 25 Passed From State ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ : ಟಾಪ್ 4 ಸ್ಥಾನ ಯುವತಿಯರ ಪಾಲು - ರಾಜ್ಯದ 25 ಮಂದಿ ಪಾಸ್

2022ರ ಸೆಪ್ಟಂರ್ ನಡೆದ ಯುಪಿಎಸ್‍ಸಿ ಮುಖ್ಯ ಪರೀಕ್ಷೆಯ ಅಂತಿಮ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ ಟಾಪ್-10 ಪಟ್ಟಿಯಲ್ಲಿ ಮೊದಲ 4 ಸ್ಥಾನವನ್ನು ಯುವತಿಯರೇ ಪಡೆದುಕೊಂಡಿದ್ದಾರೆ.

10 ಸ್ಥಾನಗಳ ಪೈಕಿ 6 ಸ್ಥಾನವನ್ನು ಯುವತಿಯರು ಪಡೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಟಾಪರ್ಸ್ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಇಶಿತಾ ಕಿಶೋರ್ , ಗರಿಮಾ ಲೋಹಿಯಾ, ಉಮಾ ಹರತಿ ಎನ್, ಸ್ಮೃತಿ ಮಿಶ್ರಾ, ಮಯೂರ್ ಹಜಾರಿಕಾ, ಗಹನಾ ನವ್ಯಾ ಜೇಮ್ಸ್, ವಸೀಮ್ ಅಹ್ಮದ್ ಭಟ್, ಅನಿರುದ್ಧ್ ಯಾದವ್, ಕನಿಕಾ ಗೋಯಲ್ ಮತ್ತು ರಾಹುಲ್ ಶ್ರೀವಾಸ್ತವ. ಈ ಹತ್ತು ಅಭ್ಯರ್ಥಿಗಳು ಟಾಪ್ 10 ಪಟ್ಟಿಯಲ್ಲಿದ್ದಾರೆ.ಸಿದ್ದರಾಮಯ್ಯ ಸಂಪುಟದ ಮತ್ತೆ ಮೂವರಿಗೆ ಕೊಠಡಿ ಹಂಚಿಕೆ

ಸೆ.2022 ರಲ್ಲಿ ನಾಗರಿಕ ಸೇವಾ ಆಯೋಗ ನಡೆಸಿದ ಲಿಖಿತ ಪರೀಕ್ಷೆ (Civil Services Examination 2022 )ಮತ್ತು ಮೇ 2023 ರಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳ ಆಧಾರದ ಮೇಲೆ 933 ಅಭ್ಯರ್ಥಿಗಳನ್ನು ಶಿಪಾರಸು ಮಾಡಲಾಗಿದೆ.

ಕರ್ನಾಟಕದ 25 ಮಂದಿ ಅಭ್ಯರ್ಥಿಗಳು ಈಬಾರಿ ತೇರ್ಗಡೆಯಾಗಿದ್ದಾರೆ.

Share This Article
Leave a comment