ರಾಜ್ಯದಲ್ಲಿ ಅಕಾಲಿಕ ಪ್ರವಾಹ : ಮನೆ, ಬೆಳೆ ಅಪಾರ ನಷ್ಟ – ಮಳೆಗೆ 24 ಮಂದಿ ಬಲಿ – ಪರಿಹಾರಕ್ಕೆ ಸೂಚನೆ

Team Newsnap
1 Min Read

ರಾಜ್ಯದ ಹಲವೆಡೆ ಅಕಾಲಿಕ ಮಳೆಯಿಂದಾಗಿ ಉಂಟಾದ ಪ್ರವಾಹದಿಂದಾಗಿ ಅಪಾರ ನಷ್ಟ ಉಂಟಾಗಿದೆ.

ನಷ್ಟದ ಅಂದಾಜು ಎಷ್ಟು ?

1) ಈವರೆಗೆ ರಾಜ್ಯದಲ್ಲೂ ಕೂಡ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

2) 658 ಮನೆಗಳಿಗೆ ಸಂಪೂರ್ಣ ಹಾನಿ, 8,498 ಮನೆಗಳಿಗೆ ಭಾಗಶಃ ಹಾನಿ ಆಗಿದೆ.

3) 191 ಜಾನುವಾರಗಳು ಸಾವನ್ನಪ್ಪಿವೆ.

4) 5 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆನಾಶವಾಗಿವೆ

5) 30,114 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ.

6) 2,203 ಕಿಮೀ ರಸ್ತೆ ಹಾಳಾಗಿದ್ದು, 165 ಸೇತುವೆಗಳಿಗೆ ಹಾನಿ ಆಗಿದೆ. 1,225 ಶಾಲಾ ಕಟ್ಟಡಗಳು, 39 ಪ್ರಾಥಮಿಕ ಆರೋಗ್ಯ ಕೇಂದ್ರ, 1,674 ವಿದ್ಯುತ್ ಕಂಬಗಳು, 278 ವಿದ್ಯುತ್ ಟ್ರಾನ್ಸ್‌ಫರ್‌ಗಳಿಗೆ ಹಾನಿ ಆಗಿದೆ.

7) ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ವರದಿಯಾಗಿದೆ.

8) ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ 3.43 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ

9) ಬಾಕಿ ಇದ್ದ 79 ಸಾವಿರ ರೈತರಿಗೆ 52 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವಂತೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ

10) ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಹಾನಿ ಪರಿಹಾರ ಕಾರ್ಯಕ್ಕೆ ಪ್ರತಿ ವಲಯಕ್ಕೆ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರಿ ಮಳೆ :

ಇನ್ನೂ ಕಳೆದ ರಾತ್ರಿ ಬೆಂಗಳೂರಿನಲ್ಲಿ ಸಹ ಭಾರೀ ಮಳೆಯಾಗಿದೆ ಹಲವಾರು ರಸ್ತೆಗಳು ಜಲಾವೃತಗೊಂಡಿದೆ.

ಮತ್ತೊಂದೆಡೆ ರಾಜಕಾಲುವೆವೊಂದು ಒಡೆದು ಅನೇಕ ಮನೆಗಳಿಗೆ ನೀರು ನುಗ್ಗಿದೆ. ಅಕಾಲಿಕ ಮಳೆಗೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ.

Share This Article
Leave a comment