ಕೇಂದ್ರ ಸಚಿವ ಸಂಪುಟ ಪುನಾರಚನೆ ನಿರೀಕ್ಷೆ – ರಾಜ್ಯಕ್ಕೆ ಆದ್ಯತೆ?

Team Newsnap
1 Min Read
Union cabinet reshuffle expected - preference for state? ಕೇಂದ್ರ ಸಚಿವ ಸಂಪುಟ ಪುನಾರಚನೆ ನಿರೀಕ್ಷೆ - ರಾಜ್ಯಕ್ಕೆ ಆದ್ಯತೆ?

ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಶೀಘ್ರದಲ್ಲಿಯೇ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುವ ನಿರೀಕ್ಷೆ ಇದೆ.

ಮುಂಬರುವ ಲೋಕಸಭಾ ಹಾಗೂ ವಿವಿಧ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಗೆ ಕೇಂದ್ರ ಸರ್ಕಾರದ ಮುಂದಾಗಿದ.ಕಾಂಗ್ರೆಸ್ – ಜೆಡಿಎಸ್ ಭ್ರಷ್ಟಾಚಾರದ ಪಕ್ಷ : ಮಂಡ್ಯದಲ್ಲಿ ಅಮಿತ್ ಶಾ ಗುಡುಗು 

ರಾಜಕೀಯ ಲೆಕ್ಕಾಚಾರದಂತೆ, ಚುನಾವಣಾ ರಾಜ್ಯಗಳಿಗೆ ಆದ್ಯತೆ ಸಿಗುವ ಸಾಧ್ಯತೆ ಇದೆ. ಸಂಪುಟ ಪುನಾರಚನೆ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ.

ಮುಂಬರುವ ಬಜೆಟ್ ಅಧಿವೇಶನಕ್ಕೆ ಮುನ್ನವೇ ಸಂಪುಟ ಪುನರ್ ರಚನೆಯಾಗುವ ನಿರೀಕ್ಷೆ ಇದೆ. ಕೆಲ ಸಚಿವರಿಗೆ ರೋಟೇಶನ್ ಆಧಾರದಲ್ಲಿ ಬೇರೆ ಖಾತೆಗಳ ಹಂಚಿಕೆ ಆಗುವ ಸಾಧ್ಯತೆಗಳಿವೆ. ಈಗಾಗಲೇ ಹಲವು ಸಚಿವರ ಮೌಲ್ಯಮಾಪನ ಮಾಡಲಾಗಿದ್ದು, ಒಂದಿಷ್ಟು ಬದಲಾವಣೆ ಸಾಧ್ಯ. ಕರ್ನಾಟಕದ ಕೆಲ ಹೊಸ ಮುಖಗಳಿಗೆ ಅವಕಾಶ ನೀಡಬಹುದು ಎನ್ನಲಾಗಿದೆ

ಸದ್ಯ ರಾಜ್ಯದಿಂದ ಆಯ್ಕೆಯಾಗಿರುವ ಭಗವಂತ ಖುಬಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸೇರಿ 6 ಮಂದಿ ಕೇಂದ್ರ ಸಚಿವರಾಗಿದ್ದಾರೆ. ಕರ್ನಾಟಕ ಚುನಾವಣೆ ಬಳಿಕ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಗಢ, ಹರ್ಯಾಣ ರಾಜ್ಯಗಳ ಚುನಾವಣೆಯಿದ್ದು, ಈ ರಾಜ್ಯಗಳ ಸಂಸದರಿಗೂ ಪುನರ್ ರಚನೆಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

Share This Article
Leave a comment