ಹಿಜಾಬ್ ಧರಿಸಿ ಬಂದ ಉಡುಪಿ ವಿದ್ಯಾರ್ಥಿನಿಯರು: ಪರೀಕ್ಷೆ ಬರೆಯದೇ ಇಬ್ಬರೂ ವಾಪಸ್

Team Newsnap
1 Min Read

ರಾಜ್ಯದಾದ್ಯಂತ ಶುಕ್ರವಾರ ಪಿಯುಸಿ ಪರೀಕ್ಷೆಗಳು ಬೆಳಗ್ಗೆ 10.15ಕ್ಕೆ ಮೊದಲ ಪರೀಕ್ಷೆ ಆರಂಭವಾಗಿವೆ . ಹಿಜಾಬ್ ಧರಿಸಿ ಪರೀಕ್ಷೆ ಅವಕಾಶ ಇಲ್ಲದ ಹಿನ್ನೆಲೆ ಪರೀಕ್ಷೆ ಬರೆಯದೆ ಪರೀಕ್ಷಾ ಕೇಂದ್ರದಿಂದ ಹೊರ ನಡೆದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಹಿಜಾಬ್ ಧರಿಸಿ ಆಗಮಿಸಿದ್ದ ಕಾರಣ ಪರೀಕ್ಷಾ ಸಿಬ್ಬಂದಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲು ನಿರಾಕರಿಸಿದ್ದರು. ಈ ವೇಳೆ ಕಾಲೇಜಿನ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದ್ದ ಆಲಿಯ ಮತ್ತು ರೇಶಂ, ಪರೀಕ್ಷೆಗೆ ಅವಕಾಶ ಕೊಡಿ ಎಂದು ವಾದ ನಡೆಸಿದ್ದರು.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ತಹಶೀಲ್ದಾರ್ ಅರ್ಚನಾ ಭಟ್ ಅವರು ಸರ್ಕಾರದ ಸುತ್ತೋಲೆ ಬಗ್ಗೆ ಹೈ ಕೋರ್ಟ್​​ ಆದೇಶದ ಬಗ್ಗೆ ಮನವರಿಕೆ ಮಾಡುವ ಕೆಲಸ ಮಾಡಿದರು.

ಆದರೆ ನಮಗೆ ನಮ್ಮ ಧರ್ಮದಲ್ಲಿನ ಆಚರಣೆಗಳೇ ಮುಖ್ಯ ಎಂದು ವಾದ ಮಂಡಿಸಿದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೇ ಮನೆಗೆ ವಾಪಸ್ ತೆರಳಿದರು.

ಮಂಡ್ಯದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷಾ ಕೇಂದ್ರಕ್ಕೆ ತೆರಳಿದರು.

Share This Article
Leave a comment