January 15, 2025

Newsnap Kannada

The World at your finger tips!

airplane ಚೀನಾ

ಚೀನಾ eastern airline

ಇನ್ನು ಮುಂದೆ ಸರ್ ನೇಮ್ ಇಲ್ಲದೇ ಹೋದರೆ UAE ವೀಸಾ ಅಲಭ್ಯ

Spread the love

ಪಾಸ್‍ಪೋರ್ಟ್ ನಲ್ಲಿ ಯಾವುದೇ ಉಪನಾಮ ( ಸರ್ ನೇಮ್ ) ಇಲ್ಲದೇ ಏಕನಾಮ ಹೊಂದಿದ್ದರೆ ಅಂತಹ ಪ್ರಯಾಣಿಕರಿಗೆ ವೀಸಾ ನೀಡುವುದಿಲ್ಲ ಎಂದು ಯುಎಇ ಹೇಳಿದೆ.

2022ರ ನವೆಂಬರ್ 21 ರಿಂದ ಈ ನಿಯಮ ಜಾರಿಗೆ ಬರಲಿದೆ. ವಿದೇಶ ಪ್ರವಾಸ ಅಥವಾ ಯಾವುದೇ ರೀತಿಯ ಪ್ರವಾಸಕ್ಕೆ ತೆರಳುವವರು ಪಾಸ್‍ಪೋರ್ಟ್‍ನಲ್ಲಿ ಏಕನಾಮ ಹೊಂದಿದ್ದರೆ, ಅವರಿಗೆ ಯುಎಇಗೆ/ವಿನಿಂದ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಏರ್‌ಇಂಡಿಯಾ, ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳು ಸುತ್ತೋಲೆ­ಯನ್ನು ಹೊರಡಿಸಿವೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ನಿಯಮ ಅನ್ವಯವಾಗುತ್ತದೆ. ಉದಾಹರಣೆಗೆ ನಿಮ್ಮ ಹೆಸರು ರಮೇಶ್ ಎಂದಷ್ಟೇ ಇದ್ದರೆ, ನಿಮಗೆ ಪ್ರವೇಶ ಸಿಗುವುದಿಲ್ಲ. ನಿಮ್ಮ ಹೆಸರಿನ ಜೊತೆಗೆ ಉಪನಾಮಗಳಿದ್ದರೆ ನೀವು ಯಾವುದೇ ಸಮಸ್ಯೆಯಿಲ್ಲದೇ ಯುಎಇಗೆ ಪ್ರವೇಶಿಸಬಹುದು. ಶಿಕ್ಷಣ ಇಲಾಖೆ: 5 ವರ್ಷಕ್ಕಿಂತ ಹೆಚ್ಚು ಕಾಲ ಇರುವ ಬೋಧಕೇತರರ ವರ್ಗಾವಣೆ

ಈ ನಿಯಮವು ವಿಸಿಟಿಂಗ್ ವೀಸಾ, ವೀಸಾ ಆನ್ ಅರೈವಲ್, ಉದ್ಯೋಗ ವೀಸಾ ಮತ್ತು ತಾತ್ಕಾಲಿಕ ವೀಸಾ ಹೊಂದಿರುವವರಿಗೆ ಅನ್ವಯವಾಗುತ್ತದೆ. ಯುಎಇ ರೆಸಿಡೆಂಟ್ ಕಾರ್ಡ್ ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ.

Copyright © All rights reserved Newsnap | Newsever by AF themes.
error: Content is protected !!