U-19 ಏಷ್ಯಾಕಪ್​ ಕಿರೀಟ ಭಾರತದ ಮುಡಿಗೆ

Team Newsnap
1 Min Read

ಶ್ರೀಲಂಕಾ ವಿರುದ್ಧದ ಅಂಡರ್​​-19 ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಉತ್ತಮ ಆಟವಾಡಿದ ಟೀಮ್​ ಇಂಡಿಯಾ ಟ್ರೋಫಿ
ಗೆದ್ದುಕೊಂಡಿದೆ

ಟೂರ್ನಿಯಲ್ಲಿ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ತಂಡ ಭಾರತದ ಬೌಲಿಂಗ್​ ದಾಳಿ ಎದುರು ಮಂಡಿಯೂರಿತು.

ಪ್ರಮುಖ ಬ್ಯಾಟ್ಸ್​​​ಮನ್​ಗಳಾದ ಚಾಮಿಂದು ವಿಕ್ರಮಸಿಂಘೆ, ಶೇವೋನ್ ಡೇನಿಯಲ್, ವಿಕೆಟ್ ಕೀಪರ್ ಅಂಜಲಾ ಭಂಡಾರಾ, ಪವನ್ ಪಥಿರಾಜಾ, ರಾನುಡಾ ಸೋಮರತ್ನೆ ಹಾಗೂ ನಾಯಕ ಡಿ. ವಲ್ಲಘೆ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು

ಲಂಕಾ ತಂಡ 57 ರನ್ ಗಳಿಸುವ ವೇಳೆಗಾಗಲೇ 7 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಂತಿಮ ಹಂತದಲ್ಲಿ ಬಾಲಂಗೋಚಿಗಳಾದ ರವೀನ್ ಡಿ ಸಿಲ್ವಾ , ಯಾಸಿರು ರೋಡ್ರಿಗೋ  ಹಾಗೂ ಮಥೀಶಾ ಪಥಿರಣ ತಂಡಕ್ಕೆ ನೆರವಾದರು .

ಮಳೆ ಬಂದ ಕಾರಣ ಪಂದ್ಯವನ್ನು ಡಕ್​ವರ್ತ್​ ಲೂಯಿಸ್​ ನಿಯಮದಡಿಯಲ್ಲಿ 38 ಓವರ್​ಗಳಿಗೆ ಕಡಿತಗೊಳಿಸಲಾಯ್ತು.

9 ವಿಕೆಟ್ ಗೆ 106 ರನ್ ಗಳಿಸಿದ್ದ ವೇಳೆ ಅವರ ಇನ್ನಿಂಗ್ಸ್ ಅನ್ನು ಕೊನೆ ಮಾಡಲಾಗಿತ್ತು. ಇನ್ನೂ ಡಿಎಲ್​ಎಸ್​ ನಿಯಮದಡಿ 38 ಓವರ್ ಗಳಲ್ಲಿ 102 ರನ್​ಗಳ ಗುರಿಯನ್ನು ಭಾರತಕ್ಕೆ ನೀಡಲಾಯ್ತು.

ಈ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಎಡವಿತು. ಆರಂಭಿಕ ಹರ್ನೂರ್ ಸಿಂಗ್ ಕೇವಲ 5 ರನ್​ಗಳಿಗೆ ಔಟಾಗಿ ನಿರಾಸೆ ಮೂಡಿಸಿದ್ರು. ಬಳಿಕ ಜೊತೆಯಾದ ರಘುವಂಶಿ ಹಾಗೂ ಶೇಖ್​ ರಶೀದ್​ ಅದ್ಭುತ ಜೊತೆಯಾಟ ಆಡುವ ಮೂಲಕ ಸುಲಭ ಗೆಲುವಿಗೆ ಕಾರಣರಾದರು. 96 ರನ್ ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ರು. 21.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಬಾರಿಸಿದ ಭಾರತ 9 ವಿಕೆಟ್​ಗಳ ಗೆಲುವು ಕಂಡಿತು.

Share This Article
Leave a comment