ಶ್ರೀಲಂಕಾ ವಿರುದ್ಧದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಉತ್ತಮ ಆಟವಾಡಿದ ಟೀಮ್ ಇಂಡಿಯಾ ಟ್ರೋಫಿ
ಗೆದ್ದುಕೊಂಡಿದೆ
ಟೂರ್ನಿಯಲ್ಲಿ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ಭಾರತದ ಬೌಲಿಂಗ್ ದಾಳಿ ಎದುರು ಮಂಡಿಯೂರಿತು.
ಪ್ರಮುಖ ಬ್ಯಾಟ್ಸ್ಮನ್ಗಳಾದ ಚಾಮಿಂದು ವಿಕ್ರಮಸಿಂಘೆ, ಶೇವೋನ್ ಡೇನಿಯಲ್, ವಿಕೆಟ್ ಕೀಪರ್ ಅಂಜಲಾ ಭಂಡಾರಾ, ಪವನ್ ಪಥಿರಾಜಾ, ರಾನುಡಾ ಸೋಮರತ್ನೆ ಹಾಗೂ ನಾಯಕ ಡಿ. ವಲ್ಲಘೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು
ಲಂಕಾ ತಂಡ 57 ರನ್ ಗಳಿಸುವ ವೇಳೆಗಾಗಲೇ 7 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಂತಿಮ ಹಂತದಲ್ಲಿ ಬಾಲಂಗೋಚಿಗಳಾದ ರವೀನ್ ಡಿ ಸಿಲ್ವಾ , ಯಾಸಿರು ರೋಡ್ರಿಗೋ ಹಾಗೂ ಮಥೀಶಾ ಪಥಿರಣ ತಂಡಕ್ಕೆ ನೆರವಾದರು .
ಮಳೆ ಬಂದ ಕಾರಣ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ 38 ಓವರ್ಗಳಿಗೆ ಕಡಿತಗೊಳಿಸಲಾಯ್ತು.
9 ವಿಕೆಟ್ ಗೆ 106 ರನ್ ಗಳಿಸಿದ್ದ ವೇಳೆ ಅವರ ಇನ್ನಿಂಗ್ಸ್ ಅನ್ನು ಕೊನೆ ಮಾಡಲಾಗಿತ್ತು. ಇನ್ನೂ ಡಿಎಲ್ಎಸ್ ನಿಯಮದಡಿ 38 ಓವರ್ ಗಳಲ್ಲಿ 102 ರನ್ಗಳ ಗುರಿಯನ್ನು ಭಾರತಕ್ಕೆ ನೀಡಲಾಯ್ತು.
ಈ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಎಡವಿತು. ಆರಂಭಿಕ ಹರ್ನೂರ್ ಸಿಂಗ್ ಕೇವಲ 5 ರನ್ಗಳಿಗೆ ಔಟಾಗಿ ನಿರಾಸೆ ಮೂಡಿಸಿದ್ರು. ಬಳಿಕ ಜೊತೆಯಾದ ರಘುವಂಶಿ ಹಾಗೂ ಶೇಖ್ ರಶೀದ್ ಅದ್ಭುತ ಜೊತೆಯಾಟ ಆಡುವ ಮೂಲಕ ಸುಲಭ ಗೆಲುವಿಗೆ ಕಾರಣರಾದರು. 96 ರನ್ ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ರು. 21.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಬಾರಿಸಿದ ಭಾರತ 9 ವಿಕೆಟ್ಗಳ ಗೆಲುವು ಕಂಡಿತು.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ