ಕಾಂಗ್ರೆಸ್ ಸೇರಲು ಮುಂದಾಗಿರುವ ಜೆಡಿಎಸ್​ನ ಇಬ್ಬರು ಶಾಸಕರು ?

Team Newsnap
2 Min Read

ರಾಜ್ಯದ ಇಬ್ಬರು ಶಾಸಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಶಾಸಕ ಶ್ರೀನಿವಾಸಗೌಡ ಹಾಗೂ ಶಾಸಕ ಕೋನಾರೆಡ್ಡಿ ಕಾಂಗ್ರೆಸ್ ಸೇರಲು ಸಿದ್ದತೆ ಮಾಡುತ್ತಿದ್ದಾರೆ.

cong join

ಶಾಸಕ ಶ್ರೀ ನಿವಾಸ್ ಗೌಡರು ಪ್ರತಿಕ್ರಿಯೆ ನೀಡಿ ನಾನು ಹಳೆಯ ಕಾಂಗ್ರೆಸ್ಸಿಗ. ಮುಂದೆಯೂ ಕಾಂಗ್ರೆಸ್ ಸೇರುವ ಇಚ್ಛೆ ಇದೆ ಎಂದಿದ್ದಾರೆ.

ಪಕ್ಷದಿಂದ ದೇವೇಗೌಡರು ನನ್ನನ್ನು ಉಚ್ಛಾಟನೆ ಮಾಡುವಂತೆ ರಾಜ್ಯಾಧ್ಯಕ್ಷರಿಗೆ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಅದನ್ನು ನೋಡಿದ ನಂತರ ನಾನೇ ಪಕ್ಷಕ್ಕೆ ರಾಜಿನಾಮೆ ನೀಡಿದ್ದೇನೆ ಎಂದರು.

ಕೋಲಾರಕ್ಕೆ ಕೆ ಸಿ‌ ವ್ಯಾಲಿ‌ ನೀರು ಬರಲು ರಮೇಶ್ ಕುಮಾರ್ ಮತ್ತು ಕೃಷ್ಣಭೈರೇಗೌಡ ಪ್ರಮುಖ ಕಾರಣಕರ್ತರು. ಈ ವಿಚಾರದಲ್ಲಿ ಅವರಿಗೆ ಹೆಚ್ಚಿನ ಆದ್ಯತೆ ಕೊಟ್ಟೆ. ಇವರು ಕೆ ಸಿ ವ್ಯಾಲಿ ವಿಚಾರದಲ್ಲಿ ಏನೂ ಮಾಡದೆ ಆದ್ಯತೆ ಕೊಡಲು ಆಗೋಲ್ಲ. ಅದಕ್ಕಾಗಿ ಈ ವಿಚಾರವನ್ನು ದೊಡ್ಡದು ಮಾಡಿದ್ರು. ನಾನೂ ಕೂಡ ಎಲ್ಲಾದರೂ ಹೋಗಲೇ‌ಬೇಕಲ್ಲ, ಇವರೇ ಅಂತಿಮ ಅಲ್ಲವಲ್ಲ ಎಂದು ಹೇಳಿದರು.

ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಇವರು ಮತ್ತು ಇವರ ಕುಟುಂಬದವರೇ ಅಧಿಕಾರ ಅನುಭವಿಸಿದರು. ಇವರೇ ಇರೋದಾ ಪಕ್ಷದಲ್ಲಿ..? ಪಕ್ಷದಲ್ಲಿ ಇವರ ಕುಟುಂಬ ಒಂದೇನಾ ಇರೋದು. ನಾನೂ ಕೂಡ ಕಾಂಗ್ರೆಸ್ ನಲ್ಲಿ ಮಂತ್ರಿಯಾಗಿದ್ದವನು.. ನನಗೂ ಆಸೆ ಆಕಾಂಕ್ಷೆ ಇರುತ್ತವೆ. ಕೆಸಿ ವ್ಯಾಲಿ ನೀರನ್ನು ಕೊಚ್ಚೆ ನೀರು ಎಂದಿದ್ದಕ್ಕೆ ನಾನೂ ರಿಯಾಕ್ಟ್‌ ಮಾಡಿದ್ದೇನೆ ಅಷ್ಟೇಎಂದರು.

ಆ ಕೊಚ್ಚೆ ನೀರನ್ನು ನಾನು ಕುಡಿದಿದ್ದೇನೆ. ಅದ್ರಿಂದ‌ ನನಗೂ ಕೂಡ ನೋವಾಗಿತ್ತು. ಇದೆಲ್ಲ ಕಹಿ ಘಟನೆಗಳಿಂದ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಮುಂದೆ ಕಾಂಗ್ರೆಸ್ ಸೇರುವ ಇಚ್ಛೆ ಇದೆ. ನಾನು ಹಳೆಯ ಕಾಂಗ್ರೆಸಿಗ.. ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದೇನೆ. ಪಕ್ಷ ಸೇರ್ಪಡೆ ಇಚ್ಛೆಯನ್ನು ತಿಳಿಸಿದ್ದೇನೆ. ಅದರ ಮಾಹಿತಿಗಳನ್ನು‌ ಮುಂದೆ ಹೇಳುತ್ತೇನೆ. ದೇವೇಗೌಡರ ಜೊತೆಯಲ್ಲಿ ಮಾತುಕತೆ ಮಾಡಿಲ್ಲ.. ಒಟ್ಟಾರೆ ಪಕ್ಷ ಬಿಡುವ ತೀರ್ಮಾನ ಮಾಡಿರೋದು ಸತ್ಯ ಎಂದಿದ್ದಾರೆ.

ನವಲಗುಂದ ಶಾಸಕರು ಕಾಂಗ್ರೆಸ್ ಗೆ :

ನವಲಗುಂದ ಜೆಡಿಎಸ್‌ ಶಾಸಕ ಕೋನರೆಡ್ಡಿ ಜೆಡಿಎಸ್ ತೊರೆದು ಕೈ ಸೇರಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಕೋನರಡ್ಡಿ ಜೆಡಿಎಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮೊನ್ನೆಯಷ್ಟೇ ನಡೆದ ಹು-ಧಾ ಪಾಲಿಕೆ ಚುನಾವಣೆ ಸೋಲು ಹಿನ್ನೆಲೆ ಹೊಣೆ ಹೊತ್ತು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ಬೆನ್ನಲ್ಲೇ 2023 ಚುನಾವಣೆಗೆ ಕೋನರಡ್ಡಿ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಕೈ ನಾಯಕರ ಜೊತೆ ಕೋನರೆಡ್ಡಿ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯರ ಜತೆ ಕೋನರಡ್ಡಿ ಒಳ್ಳೆಯ ಒಡನಾಟ ಇಟ್ಟಕೊಂಡಿದ್ದಾರಂತೆ. ಹೀಗಾಗಿ ಸಿದ್ದರಾಮಯ್ಯರ ಮೂಲಕ ಕಾಂಗ್ರೆಸ್ ಸೇರಲು ಕಸರತ್ತು ನಡೆಸಿದ್ದಾರಂತೆ.

Share This Article
Leave a comment