January 16, 2025

Newsnap Kannada

The World at your finger tips!

murder

ಸಿಧು ಮೂಸೆವಾಲಾ ಹತ್ಯೆ: ಪಂಜಾಬ್ ಪೊಲೀಸರ ಎನ್​ಕೌಂಟರ್ – ಇಬ್ಬರು ಗ್ಯಾಂಗ್​ಸ್ಟರ್ಸ್​​ ಹತ್ಯೆ

Spread the love

ಖ್ಯಾತ ಪಂಜಾಬಿ ಸಿಂಗರ್​ ಕಾಂಗ್ರೆಸ್​ ನಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪಂಜಾಬ್ ಪೊಲೀಸರು ಪಾಕ್ ಗಡಿ ಗ್ರಾಮದ ಬಳಿ ಶೂಟೌಟ್​ ಮಾಡಿ ಹತ್ಯೆಗೈದಿದ್ದಾರೆ.

ಪಾಕ್​​ ಗಡಿ ಸಮೀಪದ ಅಮೃತಸರದ ಚೋಚಾ ಭಕ್ನಾ ಗ್ರಾಮದಲ್ಲಿ ಎನ್​​ಕೌಂಟರ್ ನಡೆದಿದೆ. ಶಾರ್ಪ್​ ಶೂಟರ್​​ ಜಗರೂಪ್ ರೂಪಾ, ಮನ್​ಪ್ರೀತ್ ಎಂಬಾತನನ್ನು ಪೊಲೀಸ್ರು ಎನ್​ಕೌಂಟರ್​ ಮಾಡಿದ್ದಾರೆ. ಕಿರುತೆರೆಯ ನಟ ಯಲಹಂಕ ಬಾಲಾಜಿ ಇನ್ನಿಲ್ಲ

ಸತತ ಐದು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಪೋಲಿಸರು , ಓರ್ವ ಪತ್ರಕರ್ತ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಂಜಾಬ್​ ಪೊಲೀಸರು ಇಬ್ಬರು ಆರೋಪಿಗಳ ಖಚಿತ ಸುಳಿವು ಸಿಕ್ಕ ಮೇಲೆ ಬಂಧಿಸಲು ಹೋಗಿದ್ದರು. ಆಗ ಪೊಲೀಸರಿಂದ ಗ್ಯಾಂಗಸ್ಟರ್​​ಗಳು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ರು, ಗ್ಯಾಂಗಸ್ಟರ್​​ಗಳ ನಡುವೆ ಗುಂಡಿನ ಕಾಳಗದಲ್ಲಿ ಇಬ್ಬರು ಗ್ಯಾಂಗಸ್ಟರ್​​ಗಳು ಹತ್ಯೆಯಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!