KRS ಡ್ಯಾಂ 61 ಗೇಟ್ ಬದಲಿಸುವ ಕಾರ್ಯ ಅಂತ್ಯವಾದರೆ ಡ್ಯಾಂ ಮತ್ತಷ್ಟು ಭದ್ರ : ಸಿಎಂ ಬೊಮ್ಮಾಯಿ

Team Newsnap
1 Min Read

KRS ಆಣೆಕಟ್ಟೆಯ 16 ಗೇಟ್‍ಗಳನ್ನುಈಗ ಬದಲಿಸಲಾಗಿದೆ. ಇನ್ನೂ 61 ಗೇಟ್ ಬದಲಿಸುವ ಕಾರ್ಯ ಅಂತ್ಯಗೊಂಡರೆ ಡ್ಯಾಂ ಮತ್ತಷ್ಟು ಭದ್ರವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆಆರ್‌ಎಸ್ ಬಾಗಿನ ಕಾರ್ಯಕ್ರಮದ ವೇದಿಕೆಯಲ್ಲಿ ಬೊಮ್ಮಾಯಿ ಮಾತನಾಡಿ, ಆಷಾಢದಲ್ಲಿ ಕಾವೇರಿ ಜಲಾನಯನದ 4 ಡ್ಯಾಂಗಳು ತುಂಬಿರುವುದು ಸಂತಸದ ವಿಷಯವಾಗಿದೆ. ಕಾವೇರಿ ಹಳೇ ಮೈಸೂರು ಭಾಗದ ಜೀವನದಿ. ಪವಿತ್ರವಾದ ನದಿಯ ಸದುಪಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನೂ ಕೂಡ ಡ್ಯಾಂನ 61 ಗೇಟ್ ಬದಲಿಸಬೇಕಾಗಿದೆ. ಒಂದೂವರೆ ವರ್ಷದಲ್ಲಿ ಈ ಕಾಮಗಾರಿ ಮುಗಿಯಬೇಕು. ಗೇಟ್ ಕಾಮಗಾರಿಗೆ 160 ಕೋಟಿ ರೂ. ನೀಡಲಾಗಿದೆ. ಎಲ್ಲಾ ಗೇಟ್ ಬದಲಿಸಿದ ಬಳಿಕ ಕೆಆರ್‌ಎಸ್‍ನಲ್ಲಿ ದೊಡ್ಡ ಹಬ್ಬ ಮಾಡೋಣ ಎಂದು ಹೇಳಿದರು.

ಕೆಆರ್ ಎಸ್ ನಲ್ಲಿ ಕಾವೇರಿ ಮಾತೆಗೆ ಬಾಗೀನ ಸಮರ್ಪಿಸಿದ ಸಿಎಂ ಬೊಮ್ಮಾಯಿ

ಮೈಸೂರು ಮಹಾರಾಜರು ಡ್ಯಾಂ ಕಟ್ಟಲು ಮಾಡಿದ ತ್ಯಾಗ ಮರೆಯಲು ಸಾಧ್ಯವಿಲ್ಲ. 2008 ರಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಕೆಆರ್‌ಎಸ್ ಗೇಟ್ ರಂಧ್ರಗಳಾಗಿ ನೀರು ಸೋರುತ್ತಿತ್ತು. ಆ ಪರಿಸ್ಥಿತಿಯಲ್ಲಿ 300 ಕ್ಯೂಸೆಕ್ ನೀರು ಹರಿದು ಹೋಗುತ್ತಿತ್ತು. ಪ್ರತಿ ಹನಿಯನ್ನು ಉಳಿಸಿಕೊಳ್ಳಲು ಸಂಕಲ್ಪ ಮಾಡಿದ್ದೆವು. ಆ ಸಂದರ್ಭದಲ್ಲಿ ಗೇಟ್ ರಿಪೇರ್ ಮಾಡದಂತೆ ಒತ್ತಡಗಳು ಬಂತು. ಅವತ್ತು ರಾತ್ರಿ ನನಗೆ ನಿದ್ದೆ ಬರಲಿಲ್ಲ. ಮಾರನೇ ದಿನ ಬೆಳಗ್ಗೆ ಅಧಿಕಾರಿಗಳನ್ನು ಕರೆದು ಗೇಟ್ ಬದಲಿಸಲು ಹೇಳಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

Share This Article
Leave a comment