ತುರುವೇಕೆರೆ – ಗ್ರಾಪಂ ಸದಸ್ಯನಿಗೆ ಚಪ್ಪಲಿನಿಂದ ಹೊಡೆದ ಸದಸ್ಯೆ !

Team Newsnap
1 Min Read

ತುರುವೇಕೆರೆ: ಚಪ್ಪಲಿಯಿಂದ ಹೊಡೆದು ಸದಸ್ಯನ ಮೇಲೆ ಗ್ರಾ.ಪಂ. ಸದಸ್ಯೆ ಹಲ್ಲೆ ಮಾಡಿರುವ ಘಟನೆ ಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಬ್ಬೇಘಟ್ಟಯಲ್ಲಿ ನಡೆದಿದೆ.

ದಬ್ಬೇಘಟ್ಟ ಗ್ರಾ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸದಸ್ಯೆ ಜಿ.ಎನ್.ಸುಧಾ ಅವರು ಸೋತ ನಂತರ ಸೇಡು ತೀರಿಸಿಕೊಳ್ಳಲು, ಗ್ರಾ.ಪಂ. ಕಚೇರಿಗೆ ನುಗ್ಗಿ ಸದಸ್ಯ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನು ಓದಿ – ಜಲಾಶಯಗಳ ನೀರಿನ ಮಟ್ಟ –

ಚುನಾವಣೆಯಲ್ಲಿ ಜಿ.ಎನ್.ಸುಧಾ ವಿರುದ್ಧ ಸ್ಪರ್ಧಿಸಿದ್ದ ಛಾಯಾಮಣಿ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದರು, ಹೀಗಾಗಿ ಜಿ.ಎನ್.ಸುಧಾ ಅವರು ಸೋಲಿನ ಅಘಾತಕ್ಕೆ ಈಡಾಗಿ ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

Share This Article
Leave a comment