ಕುರ್ಚಿ ಬಿಟ್ಟುಕೊಡಲು ಮನಸಿಲ್ಲದ ಟ್ರಂಪ್

Team Newsnap
1 Min Read
picture- google

ಅಮೇರಿಕದಲ್ಲಿ‌ ಅರಾಜಕತೆ ಸೃಷ್ಠಿಯಾಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. ಇನ್ನು ಕೇವಲ ನಲವತ್ತೇ ದಿನಗಳಲ್ಲಿ ಅಧ್ಯಕ್ಷೀಯ ಚುಣಾವಣೆ ಇದೆ. ಇಂತಹ ಸಂದರ್ಭದಲ್ಲಿ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ನವೆಂಬರ್ ಚುಣಾವಣೆಯಲ್ಲಿ‌ ನಾನು ಸೋತರೂ ಸುಲಭವಾಗಿ ಕುರ್ಚಿ ಬಿಟ್ಟು ಹೋಗುವುದಿಲ್ಲ’ ಎಂದು ಹೇಳುವ ಮೂಲಕ ಎಲ್ಲರನ್ನೂ ದಂಗು ಬಡಿಸಿದ್ದಾರೆ.

ಈ ಮೊದಲು ‘ಮೇಲ್ ಇನ್ ಮತದಾನ’ ಹಾಗೂ ‘ಅಂಚೆ ಮತದಾನ’ಕ್ಕೂ ಸಹ ಇದೇ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಕೊರೋನಾ ಸಂಬಂಧ ಅಮೇರಿಕಾದಲ್ಲಿ ಅಂಚೆ ಮತ ಪದ್ಧತಿಯನ್ನು ಜಾರಿಗೊಳಿಸಿದ್ದಕ್ಕೆ ಅಸಮಾಧಾನ ತೋರಿಸಿದ್ದರು. ಚುಣಾವಣಾ ಸಂದರ್ಭದಲ್ಲಿ ಅಂಚೆ ಮತದಾನದ ಮೂಲಕ ದೊಡ್ಡ ಪ್ರಮಾಣದ ಅವ್ಯವಹಾರ ನಡೆಯಬಹುದು ಎಂಬುದು ಅವರ ಅನುಮಾನ. ಆದರೆ ವಾಸ್ತವದಲ್ಲಿ, ಚುಣಾವಣಾ ಪೂರ್ವ ಸಮೀಕ್ಷೆಗಳಲ್ಲಿ ಟ್ರಂಪ್ ಸೋಲು ಕಂಡಿದ್ದಾರೆ. ಅಲ್ಲಿನ ಜನ ಈ ಬಾರಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಪರ ಒಲವು ತೋರಿದ್ದಾರೆ‌. ಹೀಗಾಗಿಯೇ ಟ್ರಂಪ್ ಈ ವಿವಾದಗಳನ್ನು ಸೃಷ್ಠಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಟ್ರಂಪ್ ಹೇಳಿಕೆಗೆ ಸ್ವತಃ ರಿಪಬ್ಲಿಕನ್ ಪಕ್ಷದ ಮಿಟ್ ರೋಮ್ನಿ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಹೇಳಿಕೆಯನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಶಾಂತಿಯುತ ಅಧಿಕಾರ ಹಸ್ತಾಂತರ ಪ್ರಜಾಪ್ರಭುತ್ವದ ಮೂಲ ತತ್ವ ಎಂದು ಹೇಳಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್ ಹೇಳಿಕೆಗೆ ‘ಹೇಗೆ ಪ್ರತಿಕ್ರಿಯಸಬೆಕೋ ಗೊತ್ತಾಗುತ್ತಿಲ್ಲ’ ಎಂದಿದ್ದಾರೆ.

ಅಲ್ಲದೇ ಟ್ರಂಪ್ ಅಮೇರಿಕದ ಸುಪ್ರೀಂ ಕೋರ್ಟ್ ನಲ್ಲಿ ತೆರವಾಗಲಿರುವ ನ್ಯಾಯಾಧೀಶ ಸ್ಥಾನ ತುಂಬಲು ಬಹಳ ಉತ್ಸುಕರಾಗಿದ್ದಾರೆ. ಈ ಮೂಲಕ ಚುಣಾವಣೆ ನಂತರವೂ ಅವರು ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆಗಳು ಗೋಚರಿಸುತ್ತಿವೆ. ಈ ವಿವಾದ ಇಷ್ಟಕ್ಕೇ ಮುಗಿಯಲಾರದು ಎಂದಿದ್ದಾರೆ ಟ್ರಂಪ್ ಸ್ವಪಕ್ಷೀಯರು.

Share This Article
Leave a comment