ನ್ಯೂಸ್ ಚಾನಲ್​ಗಳ ಟಿಆರ್​ಪಿ ರೇಟಿಂಗ್ 3 ತಿಂಗಳ ಕಾಲ ಸ್ಥಗಿತ

Team Newsnap
1 Min Read

ಇತ್ತೀಚೆಗೆ ಮುಂಬೈನಲ್ಲಿ ಟಿಆರ್​ಪಿ ಗೋಲ್ ಮಾಲ್ ಬೆಳಕಿಗೆ ಬಂದ ಬೆನ್ನಲ್ಲೇ ಬಾರ್ಕ್ ಸಂಸ್ಥೆ ಎಲ್ಲಾ ಸುದ್ದಿ ವಾಹಿನಿಗಳ ಟಿಆರ್​ಪಿಯನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಆದರೆ, ರಾಜ್ಯವಾರು ಮತ್ತು ಭಾಷಾವಾರು ನ್ಯೂಸ್ ವಿಭಾಗಕ್ಕೆ ಬರುವ ವೀಕ್ಷಕರ ಸಂಖ್ಯೆಯನ್ನು ನೀಡುವ ಕಾರ್ಯ ಮುಂದುವರಿಯುತ್ತದೆ ಎಂದು ಬ್ರಾಡ್​ಕ್ಯಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ಸ್ಪಷ್ಟಪಡಿಸಿದೆ.

ಒಂದು ನ್ಯೂಸ್ ಚಾನೆಲ್​ಗೆ ಪ್ರತ್ಯೇಕವಾಗಿ ಟಿಆರ್​ಪಿ ರೇಟಿಂಗ್ ಮಾಹಿತಿ ಇರುವುದಿಲ್ಲ. ಈ ಮೂರು ತಿಂಗಳಲ್ಲಿ ಟಿಆರ್​ಪಿ ವ್ಯವಸ್ಥೆಯನ್ನು ಮರುಪರಿಶೀಲಿಸಿ ಲೋಪಸರಿಪಡಿಸುವ ಕೆಲಸ ಮಾಡಲಾಗುತ್ತದೆ ಎಂದು ಆ ಸಂಸ್ಥೆ ಹೇಳಿದೆ.

ಸುದ್ದಿ ಬಿಟ್ಟು ಬೇರೆ ಎಂಟರ್​ಟೈನ್ಮೆಂಟ್, ಸ್ಪೋರ್ಟ್ಸ್​ನಂಥ ಬೇರೆ ವಿಭಾಗಗಳ ವಾಹಿನಿಗಳ ಟಿಆರ್​ಪಿ ಯಥಾಪ್ರಕಾರ ಮುಂದುವರಿಯಲಿದೆ. ಸುದ್ದಿ ಬಿಟ್ಟು ಬೇರೆ ಎಂಟರ್​ಟೈನ್ಮೆಂಟ್, ಸ್ಪೋರ್ಟ್ಸ್​ನಂಥ ಬೇರೆ ವಿಭಾಗಗಳ ವಾಹಿನಿಗಳ ಟಿಆರ್​ಪಿ ಯಥಾಪ್ರಕಾರ ಮುಂದುವರಿಯಲಿದೆ.

ಸುದ್ದಿವಾಹಿನಿಗಳ ಟಿಆರ್​ಪಿಯನ್ನು 3 ತಿಂಗಳು ನಿಲ್ಲಿಸುವ ಬಾರ್ಕ್ ಸಂಸ್ಥೆಯ ನಿರ್ಧಾರವನ್ನು ನ್ಯೂಸ್ ಬ್ರಾಡ್​ಕ್ಯಾಸ್ಟರ್ಸ್ ಅಸೋಷಿಯೇಶನ್ (ಎನ್​ಬಿಎ) ಸ್ವಾಗತಿಸಿದೆ. ಟಿವಿ ರೇಟಿಂಗ್​ನ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಸರಿಪಡಿಸಲು ಈ 12 ವಾರಗಳನ್ನು ಬಾರ್ಕ್ ಉಪಯೋಗಿಸಬೇಕು ಎಂದು ಎನ್​ಬಿಎ ಕೂಡ ಸಲಹೆ ನೀಡಿದೆ.

ಟಿಆರ್​ಪಿ ಎಂದರೆ ಟೆಲಿವಿಶನ್ ರೇಟಿಂಗ್ ಪಾಯಿಂಟ್ಸ್. ಇದು ನ್ಯೂಸ್ ಚಾನೆಲ್​ಗಳನ್ನೂ ಸೇರಿ ಟಿವಿ ವಾಹಿನಿಗಳನ್ನು ಎಷ್ಟು ಮಂದಿ ವೀಕ್ಷಿಸುತ್ತಾರೆ ಎಂದು ಅಂದಾಜು ಮಾಡುವ ಸ್ವಯಂಚಾಲಿತ ಸಮೀಕ್ಷಾ ವ್ಯವಸ್ಥೆಯಾಗಿದೆ. ಬಾರ್ಕ್ ಸಂಸ್ಥೆ ಈ ಕಾರ್ಯವನ್ನು ನಿರ್ವಹಿಸುತ್ತದೆ. ದೇಶದ ಅನೇಕ ನಗರ, ಪಟ್ಟಣ, ಗ್ರಾಮಗಳಲ್ಲಿ ಸೆಟ್ ಟಾಪ್ ಬಾಕ್ಸ್ ಇರುವ ಕೆಲ ಆಯ್ದ ಮನೆಗಳಲ್ಲಿ ರಹಸ್ಯವಾಗಿ ಟಿಆರ್​ಪಿ ಮೀಟರ್​ಗಳನ್ನು ಅಳವಡಿಸಲಾಗುತ್ತದೆ. ಈ ಮೀಟರ್​ಗಳಿರುವುದು ಆ ಮನೆಗಳವರಿಗೂ ಗೊತ್ತಿರುವುದಿಲ್ಲ. ಆ ಮನೆಗಳಲ್ಲಿ ಏನು ವೀಕ್ಷಣೆ ಮಾಡುತ್ತಾರೆ ಅದರ ಮೇಲೆ ಟಿಆರ್​ಪಿ ನಿರ್ಧಾರವಾಗುತ್ತದೆ.

TAGGED: , ,
Share This Article
Leave a comment