ಇತ್ತೀಚೆಗೆ ಮುಂಬೈನಲ್ಲಿ ಟಿಆರ್ಪಿ ಗೋಲ್ ಮಾಲ್ ಬೆಳಕಿಗೆ ಬಂದ ಬೆನ್ನಲ್ಲೇ ಬಾರ್ಕ್ ಸಂಸ್ಥೆ ಎಲ್ಲಾ ಸುದ್ದಿ ವಾಹಿನಿಗಳ ಟಿಆರ್ಪಿಯನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಆದರೆ, ರಾಜ್ಯವಾರು ಮತ್ತು ಭಾಷಾವಾರು ನ್ಯೂಸ್ ವಿಭಾಗಕ್ಕೆ ಬರುವ ವೀಕ್ಷಕರ ಸಂಖ್ಯೆಯನ್ನು ನೀಡುವ ಕಾರ್ಯ ಮುಂದುವರಿಯುತ್ತದೆ ಎಂದು ಬ್ರಾಡ್ಕ್ಯಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ಸ್ಪಷ್ಟಪಡಿಸಿದೆ.
ಒಂದು ನ್ಯೂಸ್ ಚಾನೆಲ್ಗೆ ಪ್ರತ್ಯೇಕವಾಗಿ ಟಿಆರ್ಪಿ ರೇಟಿಂಗ್ ಮಾಹಿತಿ ಇರುವುದಿಲ್ಲ. ಈ ಮೂರು ತಿಂಗಳಲ್ಲಿ ಟಿಆರ್ಪಿ ವ್ಯವಸ್ಥೆಯನ್ನು ಮರುಪರಿಶೀಲಿಸಿ ಲೋಪಸರಿಪಡಿಸುವ ಕೆಲಸ ಮಾಡಲಾಗುತ್ತದೆ ಎಂದು ಆ ಸಂಸ್ಥೆ ಹೇಳಿದೆ.
ಸುದ್ದಿ ಬಿಟ್ಟು ಬೇರೆ ಎಂಟರ್ಟೈನ್ಮೆಂಟ್, ಸ್ಪೋರ್ಟ್ಸ್ನಂಥ ಬೇರೆ ವಿಭಾಗಗಳ ವಾಹಿನಿಗಳ ಟಿಆರ್ಪಿ ಯಥಾಪ್ರಕಾರ ಮುಂದುವರಿಯಲಿದೆ. ಸುದ್ದಿ ಬಿಟ್ಟು ಬೇರೆ ಎಂಟರ್ಟೈನ್ಮೆಂಟ್, ಸ್ಪೋರ್ಟ್ಸ್ನಂಥ ಬೇರೆ ವಿಭಾಗಗಳ ವಾಹಿನಿಗಳ ಟಿಆರ್ಪಿ ಯಥಾಪ್ರಕಾರ ಮುಂದುವರಿಯಲಿದೆ.
ಸುದ್ದಿವಾಹಿನಿಗಳ ಟಿಆರ್ಪಿಯನ್ನು 3 ತಿಂಗಳು ನಿಲ್ಲಿಸುವ ಬಾರ್ಕ್ ಸಂಸ್ಥೆಯ ನಿರ್ಧಾರವನ್ನು ನ್ಯೂಸ್ ಬ್ರಾಡ್ಕ್ಯಾಸ್ಟರ್ಸ್ ಅಸೋಷಿಯೇಶನ್ (ಎನ್ಬಿಎ) ಸ್ವಾಗತಿಸಿದೆ. ಟಿವಿ ರೇಟಿಂಗ್ನ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಸರಿಪಡಿಸಲು ಈ 12 ವಾರಗಳನ್ನು ಬಾರ್ಕ್ ಉಪಯೋಗಿಸಬೇಕು ಎಂದು ಎನ್ಬಿಎ ಕೂಡ ಸಲಹೆ ನೀಡಿದೆ.
ಟಿಆರ್ಪಿ ಎಂದರೆ ಟೆಲಿವಿಶನ್ ರೇಟಿಂಗ್ ಪಾಯಿಂಟ್ಸ್. ಇದು ನ್ಯೂಸ್ ಚಾನೆಲ್ಗಳನ್ನೂ ಸೇರಿ ಟಿವಿ ವಾಹಿನಿಗಳನ್ನು ಎಷ್ಟು ಮಂದಿ ವೀಕ್ಷಿಸುತ್ತಾರೆ ಎಂದು ಅಂದಾಜು ಮಾಡುವ ಸ್ವಯಂಚಾಲಿತ ಸಮೀಕ್ಷಾ ವ್ಯವಸ್ಥೆಯಾಗಿದೆ. ಬಾರ್ಕ್ ಸಂಸ್ಥೆ ಈ ಕಾರ್ಯವನ್ನು ನಿರ್ವಹಿಸುತ್ತದೆ. ದೇಶದ ಅನೇಕ ನಗರ, ಪಟ್ಟಣ, ಗ್ರಾಮಗಳಲ್ಲಿ ಸೆಟ್ ಟಾಪ್ ಬಾಕ್ಸ್ ಇರುವ ಕೆಲ ಆಯ್ದ ಮನೆಗಳಲ್ಲಿ ರಹಸ್ಯವಾಗಿ ಟಿಆರ್ಪಿ ಮೀಟರ್ಗಳನ್ನು ಅಳವಡಿಸಲಾಗುತ್ತದೆ. ಈ ಮೀಟರ್ಗಳಿರುವುದು ಆ ಮನೆಗಳವರಿಗೂ ಗೊತ್ತಿರುವುದಿಲ್ಲ. ಆ ಮನೆಗಳಲ್ಲಿ ಏನು ವೀಕ್ಷಣೆ ಮಾಡುತ್ತಾರೆ ಅದರ ಮೇಲೆ ಟಿಆರ್ಪಿ ನಿರ್ಧಾರವಾಗುತ್ತದೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ