ಭಾರತ ಸೋಮವಾರ ತನ್ನ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ.
ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ಕೆಂಪು ಕೋಟೆಯಲ್ಲಿ ತ್ರಿವರ್ಣ ಸತತ 9 ನೇ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದೇನೆ . ಈ ವರ್ಷ ಭಾರತಕ್ಕೆ ಬಹಳ ವಿಶೇಷವಾಗಿದೆ ಮತ್ತು ಇಡೀ ದೇಶ ಇದನ್ನು ಸ್ವಾತಂತ್ರ್ಯದ ಅಮೃತವೆಂದು ಆಚರಿಸುತ್ತಿದೆ ಎಂದರು.
ಪ್ರಧಾನಿ ಮೋದಿ ಅವರು ಮೊದಲು ರಾಜ್‌ಘಾಟ್‌ಗೆ ಆಗಮಿಸಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ದೇಶವನ್ನುದ್ದೇಶಿಸಿ ಮೋದಿ ಮಾತುಗಳ ಮುಖ್ಯಾಂಶಗಳು
- ದೇಶದ ಮೂಲೆಮೂಲೆಯಲ್ಲೂ ಸಂಭ್ರಮ ಮನೆ ಮಾಡಿದೆ. ನಮ್ಮ ತ್ರಿವರ್ಣ ಧ್ವಜ ಹೆಮ್ಮೆಯಿಂದ ಪ್ರಜ್ವಲಿಸುತ್ತಿದೆ. ಈ ದಿನ ಐತಿಹಾಸಿಕ ದಿನವಾಗಿದೆ. ಹೊಸ ಸಂಕಲ್ಪದೊಂದಿಗೆ ಮುನ್ನಡೆಯುವ ಕ್ಷಣ
- ಸ್ವಾತಂತ್ರ್ಯಕ್ಕಾಗಿ ಇಡೀ ದೇಶ ಸಂಘರ್ಷ ನಡೆಸಿತ್ತು, ನೂರಾರು ವರ್ಷ ಗುಲಾಮಗಿರಿ ವಿರುದ್ಧ ಹೋರಾಟ ನಡೆಸಿದ ಪ್ರತಿಯೊಬ್ಬ ಮಹನೀಯರಿಗೆ ನಮಿಸುವ ಸಂದರ್ಭ. ಪ್ರತಿಯೊಂದು ಬಲಿದಾನವನ್ನು ನೆನಪಿಸೋ ಸಮಯ. ನಾವೆಲ್ಲರೂ ಗಾಂಧೀಜಿ, ಬೋಸ್, ಅಂಬೇಡ್ಕರ್ ನೆನಪಿಸಬೇಕು
- ವೀರ ಸಾವರ್ಕರ್ ಅವರ ಹೋರಾಟ ನೆನಪಿಸಿಕೊಳ್ಳಬೇಕು, ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಚಂದ್ರಶೇಖರ್ ಆಝಾದ್, ಅಷ್ಫಾಖುಲ್ಲಾ ಖಾನ್, ಹೀಗೆ ಹಲವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.
- ರಾಣಿ ಲಕ್ಷ್ಮೀ ಬಾಯಿ, ದುರ್ಗಾ ಭಾಬಿ, ರಾಣಿ ಚೆನ್ನಮ್ಮ ಬೇಗಂ ಹಜ್ರತ್ ಮಹಲ್ರಂಥವರು ದೇಶದ ನಾರಿಶಕ್ತಿ ಸ್ವಾತಂತ್ರ್ಯದ ಹೋರಾಟ ಮಾಡಿದವರಿಗೆ ನಮನ, ಸ್ವಾತಂತ್ರ್ಯದ ನಂತರ ದೇಶ ನಿರ್ಮಿಸಿದವರಿಗೆ ನಮನ. ನೆಹರು, ಶಾಸ್ತ್ರಿ, ವಿನೋಬಾ ಭಾವೆ, ಅಸಂಖ್ಯ ಮಹಾಪುರುಷರು, ದೇಶ ನಿರ್ಮಿಸಿದ ಮಹಾಪುರುಷರಿಗೆ ನಮಿಸುವ ಸಮಯ
- ನಮ್ಮ ಆದಿವಾಸಿ ಸಮಾಜವನ್ನೂ ಗೌರವಿಸಬೇಕು, ಆದಿವಾಸಿ ಬಾಂಧವರಲ್ಲಿ ದೇಶಭಕ್ತಿ ಸಮ್ಮಿಲಿತವಾಗಿದೆ. ಹಲವು ಮಹಾಪುರುಷರು ದೇಶಕ್ಕಾಗಿ ದುಡಿದಿದ್ದಾರೆ, ಎಲ್ಲಾ ಮಹಾಪುರುಷರಿಗೆ ನೆನಪಿಸಿಕೊಳ್ಳುವ ಸಮಯ. ಇಂದು ದೇಶ ಎಲ್ಲಾ ವೀರರಿಗೆ ನೆನಪಿಸಿಕೊಂಡು ನಮಿಸಿದೆ.
- ನಿನ್ನೆ ಆ.14ರಂದು ವಿಭಜನೆಯ ಸ್ಮೃತಿ ದಿನ ನೆನಪಿಸಿಕೊಂಡಿದೆ, ವಿಭಜನೆಯ ಆ ದುಃಖವನ್ನು ದೇಶ ನೆನಪಿಸಿಕೊಂಡಿದೆ. ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ, ದೇಶದ ಸಂಕಲ್ಪ ಪೂರ್ಣಗೊಳಿಸಿದವರಿಗೆ ನಮನ. ಸೇನಾಸಿಬ್ಬಂದಿ, ಪೊಲೀಸರು, ಜನಪ್ರತಿನಿಧಿಗಳಿಗೆ ನಮನ.
- ಸಂಸದರು, ಶಾಸಕರು, ಎಲ್ಲರ ಸೇವೆ ಸ್ಮರಿಸುವ ದಿನ, ದೇಶದ ಕೋಟಿಕೋಟಿ ನಾಗರೀಕರಿಗೆ ನಮನ. ದೇಶ ಮುನ್ನಡೆಸಲು ಶ್ರಮಿಸಿದವರಿಗೆ ನಮನ.
75 ವರ್ಷಗಳ ನಮ್ಮ ಯಾತ್ರೆ ಹಲವು ಏರಿಳಿತ ಕಂಡಿದೆ. ಸುಖ-ದುಖಃದ ಛಾಯೆ ಬಂದು ಹೋಗಿದೆ. - ದೇಶ ಎಂದಿಗೂ ಸೋಲನ್ನು ಒಪ್ಪಿಕೊಂಡಿಲ್ಲ, ಸಂಕಲ್ಪಗಳು ಮರೆಯಾಗಲು ಬಿಟ್ಟಿಲ್ಲ. ಶತಮಾನಗಳ ಗುಲಾಮಗಿರಿ ನಂತರವೂ ಎದ್ದುನಿಂತಿದೆ. ನಕಾರಾತ್ಮಕವಾಗಿ ಯೋಚಿಸಿದವರಿಗೆ ಮಣ್ಣಿನ ಗುಣ ಗೊತ್ತಿರ್ಲಿಲ್ಲ, ನಾವು ಹಲವು ಸಂಕಟಗಳನ್ನು ಎದುರಿಸಿದ್ದೇವೆ.
- ಆಹಾರ, ಯುದ್ಧ, ಭಯೋತ್ಪಾದನೆ ಸಂಕಷ್ಟ ಎದುರಿಸಿದ್ದೇವೆ, ಪ್ರಾಕೃತಿಕ ವಿಕೋಪಗಳನ್ನು ಎದುರಿಸಿದ್ದೇವೆ. ಎಂಥಾ ಸಂಕಷ್ಟದಲ್ಲೂ ಭಾರತ ಮುನ್ನಡೆದಿದೆ, ಭಾರತದ ವಿವಿಧತೆಯೇ ಭಾರತದ ಅಪ್ರತಿಮ ಶಕ್ತಿ, ಭಾರತದ ಬಳಿ ಸಾಮರ್ಥ್ಯ ಇರೋದು ಜಗತ್ತಿಗೆ ಗೊತ್ತಿರಲಿಲ್ಲ.
ಕೆಂಪುಕೋಟೆಯಲ್ಲಿ ಭಾರೀ ಭದ್ರತಾ ವ್ಯವಸ್ಥೆ
ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೆಂಪು ಕೋಟೆಯ ಪ್ರವೇಶ ದ್ವಾರದಲ್ಲಿ ಬಹುಪದರದ ಭದ್ರತಾ ಕಾರ್ಡನ್ ಜೊತೆಗೆ ಮುಖ ಗುರುತಿಸುವಿಕೆ ವ್ಯವಸ್ಥೆಯುಳ್ಳ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಬಾರಿ ಸುಮಾರು 7000 ಅತಿಥಿಗಳು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ನಾಡಿನೆಲ್ಲೆಡೆ ಸಂಭ್ರಮ : ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ
ರಾಷ್ಟ್ರೀಯ ಸ್ಮಾರಕದ ಸುತ್ತಲೂ 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು
ನಿಯೋಜಿಸಲಾಗಿದೆ. ಡ್ರೋನ್ ಮತ್ತು UAV ಗಳಿಂದ ಯಾವುದೇ ಸಂಭವನೀಯ ಬೆದರಿಕೆಯನ್ನು ಎದುರಿಸಲು ದೆಹಲಿ ಪೊಲೀಸರು 4 ಕಿಮೀ ವ್ಯಾಪ್ತಿಯ ಕೆಂಪು ಕೋಟೆ ಪ್ರದೇಶದಲ್ಲಿ DRDO ಅಭಿವೃದ್ಧಿಪಡಿಸಿದ ಕೌಂಟರ್ ಡ್ರೋನ್ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ