ಕೊನೆ ಉಸಿರು ಇರುವ ತನಕ ಮಂಡ್ಯದ ಸೊಸೆಯಾಗಿ ಇರುವೆ – ಸುಮಲತಾ

Team Newsnap
1 Min Read
Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಈ ಮಣ್ಣಿನ ಸೊಸೆಯಾಗಿ ನಾನು ಕೊನೆಯ ಉಸಿರು ಇರುವವರೆಗೆ ಇರುತ್ತೇನೆ. ಮಂಡ್ಯದ ಸೊಸೆಯ ಸ್ಥಾನ ಯಾರಿಂದಲೂ ಕಿತ್ತುಕೊಳ್ಳಲು ಆಗಲ್ಲ ಎಂದ ಸಂಸದೆ ಸುಮಲತಾ ಅಂಬರೀಶ್ .

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಎಲೆಕ್ಷನ್ ಗೆದ್ದ ದಿನದಿಂದಲೂ ಮಂಡ್ಯದಲ್ಲಿ ರಾಜಕೀಯ ಮಾಡುತ್ತಾರೆ. ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಮಂಡ್ಯ ಜಿಲ್ಲೆಗೂ ಸ್ವಾತಂತ್ರ್ಯ ಬರಬೇಕಿದೆ. ಮಂಡ್ಯದಲ್ಲಿ ಬದಲಾವಣೆಯಾಗಬೇಕಿದೆ. ಕೊರೊನಾ ಸಂದರ್ಭದಲ್ಲಿ ಜನ ಪ್ರಾಣ ಕಳೆದುಕೊಳ್ಳುತ್ತಿದ್ದರು. ಈ ವೇಳೆ ಸಭೆ ಕರೆದರೆ ಗಲಭೆಗಳನ್ನು ಮಾಡುತ್ತಾ ಇದ್ದರು. ಇದಕ್ಕೆಲ್ಲಾ ಫುಲ್‌ಸ್ಟಾಪ್ ಇಡಬೇಕು. ಸಚ್ಚಿ ಅಂತಹವರನ್ನು ಮುಂದೆ ಗೆಲ್ಲಿಸಬೇಕು ಎಂದರು.

ಚುನಾವಣೆ ಸಂದರ್ಭದಲ್ಲಿ ರೈತರು ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಮೈಶುಗರ್ ಅನ್ನು ಪುನರಾರಂಭ ಮಾಡಬೇಕೆಂದು ಕೇಳಿಕೊಂಡಿದ್ದರು. 3 ವರ್ಷದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿರುವುದು ನಿಮ್ಮ ಮುಂದೆಯೇ ಇದೆ. ಕೆಆರ್‌ಎಸ್‌ಗೆ ಅಪಾಯವಾಗುವ ಜಾಗದಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

ಎಷ್ಟೋ ವರ್ಷಗಳ ಹೋರಾಟ. ನಾನು 3 ವರ್ಷದಿಂದ ಸಿಎಂ ಹಾಗೂ ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಈಗ ಕೊಟ್ಟ ಮಾತನ್ನು ನೆರವೇರಿಸಿರುವ ತೃಪ್ತಿ ನನಗಿದೆ. ಒಂದಷ್ಟು ಜನ ಹೇಳುತ್ತಾರೆ, ರಾಜಕೀಯದಲ್ಲಿ ಏನು ಮಾಡಬೇಕು ಎಂದು ಸಲಹೆ ನೀಡುತ್ತಾರೆ. ನನಗೆ ಬೆಂಬಲ ಕೊಟ್ಟಿರುವವರ ಕೈಯನ್ನು ನಾನು ಬಿಡುವುದಿಲ್ಲ. ಸಚ್ಚಿಯನ್ನು ಸಹ ಕೈ ಬಿಡುವುದಿಲ್ಲ. ಅಂಬರೀಶ್ ಅವರು ಸೀಟ್ ಕೊಡಿ, ಮಂತ್ರಿ ಸ್ಥಾನ ಕೊಡಿ ಎಂದು ಕೇಳಿಲ್ಲ. ಅವರ ದಾರಿಯಲ್ಲಿಯೇ ನಾನು ಕೂಡಾ ನಡೆದುಕೊಂಡು ಹೋಗುತ್ತೇನೆ ಎಂದರು.

ಕೆಂಪುಕೋಟೆಯಲ್ಲಿ ಹಾರಿದ ತ್ರಿವರ್ಣ ಧ್ವಜ, ಪ್ರಧಾನಿ ಮೋದಿಯಿಂದ ಧ್ವಜಾರೋಹಣ

ಅಂಬರೀಶ್ ಕುಟುಂಬದಲ್ಲಿ ಕುಟುಂಬ ರಾಜಕೀಯ ಮಾಡುವುದಿಲ್ಲ. ಕುಟುಂಬ ರಾಜಕೀಯ ಮಾಡುವವರು ಇದ್ದಾರೆ, ಅರ‍್ಯಾರು ಎಂಬುದು ಎಲ್ಲರಿಗೂ ಗೊತ್ತು. ಇನ್ನು 7-8 ತಿಂಗಳಿನಲ್ಲಿ ಬದಲಾವಣೆಗೆ ಅವಕಾಶವಿದೆ. ಆ ಬದಲಾವಣೆಗಳನ್ನು ಮಾಡಿ, ಈ ಮಣ್ಣಿನ ಸೊಸೆಯಾಗಿಯೇ ಇರುವೆ ಎಂದು ಹೇಳಿಕೆ ನೀಡಿದರು.

Share This Article
Leave a comment