January 3, 2025

Newsnap Kannada

The World at your finger tips!

temple , rain , accident

Tree fell on a temple shed in Maharashtra; 7 dead - 30 injured ಮಾಹಾರಾಷ್ಟ್ರದಲ್ಲಿ ದೇವಸ್ಥಾನದ ಶೆಡ್​​ ಮೇಲೆ ಉರುಳಿ ಬಿದ್ದ ಮರ; 7 ಜನ ಸಾವು - 30 ಮಂದಿಗೆ ಗಾಯ

ಮಾಹಾರಾಷ್ಟ್ರದಲ್ಲಿ ದೇವಸ್ಥಾನದ ಶೆಡ್​​ ಮೇಲೆ ಉರುಳಿ ಬಿದ್ದ ಮರ; 7 ಜನ ಸಾವು – 30 ಮಂದಿಗೆ ಗಾಯ

Spread the love

ಕಳೆದ ರಾತ್ರಿ ಸುರಿದ ಭಾರೀ ಮಳೆ ಮತ್ತು ಗಾಳಿಯ ಪರಿಣಾಮ ಬೃಹತ್ ಮರವೊಂದು ದೇವಸ್ಥಾನದ ತಗಡಿನ ಶೆಡ್​​​ ಮೇಲೆ ಉರುಳಿ ಬಿದ್ದ ಪರಿಣಾಮ 7 ಜನರು ಸಾವನ್ನಪ್ಪಿ 30 ಮಂದಿ ಗಾಯಗೊಂಡಘಟನೆ ಮಾಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರ್​ ತೆಹಸಿಲ್​​ನ ಪಾರಸ್​ ಗ್ರಾಮದ ದೇವಸ್ಥಾನದಲ್ಲಿ ನಡೆದಿದೆ.

ಪೂಜೆ ನಡೆಯುವ ವೇಳೆ ಅಲ್ಲಿನ ಬಾಬುಜಿ ಮಹರಾಜ್​ ಮಂದಿರದ ಆವರಣದಲ್ಲಿದ್ದ ಬೃಹತ್​ ಬೇವಿನ ಮರ ನೆಲಕಪ್ಪಳಿಸಿದೆ.

ಭಾರೀ ಗಾಳಿ, ಮಳೆಯಿಂದಾಗಿ ದೇವಸ್ಥಾನದ ತಗಡಿನ ಶೆಡ್​ ಮೇಲೆ ಮರ ಉರುಳಿದೆ. ಮರ ಉರುಳಿ ಬಿದ್ದ ಪರಿಣಾಮ ಅದರಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.

ಪೊಲೀಸರು ಮತ್ತು ಆ್ಯಂಬುಲೆನ್ಸ್​ ಕೂಡಲೇ ಸ್ಥಳಕ್ಕಾಗಮಿಸಿ ಮರದಡಿ ಸಿಲುಕಿದವರನ್ನು ರಕ್ಷಣೆ ಮಾಡಿದ್ದಾರೆ. ಜೆಸಿಬಿ ಸಹಾಯದ ಮೂಲಕ ಶೆಡ್​ ಅನ್ನು ತೆರವುಗೊಳಿಸಲಾಗಿದೆ.ಇದನ್ನು ಓದಿ –ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ : ವೈವಿಎಸ್ ದತ್ತ ಘೋಷಣೆ

Copyright © All rights reserved Newsnap | Newsever by AF themes.
error: Content is protected !!