ಸಂಗೀತದ ಮೂಲಕ ಮಕ್ಕಳಿಗೆ ಸಂಸ್ಕಾರ ಬೆಳಸಿ – ಡಾ.ಹೆಬ್ರಿ ಕರೆ

Team Newsnap
2 Min Read

ಸಂಗೀತ ಸಾಹಿತ್ಯ ನಾಟ್ಯ ರಂಗಕಲೆ ಇತ್ಯಾದಿ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಪೋಷಕರು ಬಳಸಬೇಕಾದ ಅಗತ್ಯತೆ ಹಾಗೂ ಅನಿವಾರ್ಯತೆ ಇದೆ ಎಂದು ಡಾ.ಪ್ರದೀಪ್ ಕುಮಾರ್ ಹೆಬ್ರಿ ಕರೆ ನೀಡಿದರು.

ಮಂಡ್ಯ ಗಾಂಧಿ ಭವನದಲ್ಲಿ ಗಿಟಾರ್ ಹಾಗೂ ಕೀಬೋರ್ಡ್ ವಾದಕ ಸಿ. ದೇವರಾಜು ಅವರ ನೇತೃತ್ವದ ತರಬೇತಿ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ, ಸಾಂಪ್ರದಾಯಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನಿತರನ್ನು ಕುರಿತು ಮಾತನಾಡಿದ ಹೆಬ್ರಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಮುಂದಿನ ಭವಿಷ್ಯದ ಪ್ರಜೆಗಳಾದ ಮಕ್ಕಳ ಮುಖಾಂತರ ನೀಡುವ ಅಗತ್ಯತೆ ಹಾಗೂ ಅನಿವಾರ್ಯತೆ ಎಲ್ಲಾ ಪೋಷಕರದ್ದಾಗಿದೆ ಎಂದ ಅವರು ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಸಾಂಸ್ಕೃತಿಕ ಹಾಗೂ ಸಂಗೀತ ಕಲೆಗಳ ಬಗ್ಗೆ ಮಕ್ಕಳಲ್ಲಿ ಹುದುಗಿರುವ ಕಲಾ ಪ್ರತಿಭೆಯನ್ನು ಹೊರತೆಗೆಯಲು ಮತ್ತು ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಕಲಾ ಪ್ರಪಂಚ ಮಹತ್ತರ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಮಂಡ್ಯ ನಗರದಲ್ಲಿ ತಮ್ಮ ಅನನ್ಯ ಕಲಾ ಸೇವೆಯಿಂದ ಈ ಇಬ್ಬರು ಸಾಧಕರುಗಳಾದ ಕೊಳಲು ವಾದಕ ಎನ್ಎಸ್ ಮಣಿ ಹಾಗೂ ರಂಗ ಕಲಾಕ್ಷೇತ್ರದ ತಬಲವಾದಕ ಸ್ಟೂಡೆಂಟ್ ಸಿದ್ದರಾಮು ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಸೋಮವಾರ ರಿಲೀಸ್ : ಸಿಎಂ

ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಲೆಗಳನ್ನು ಮಕ್ಕಳಿಗೆ ಸೂಕ್ತವಾಗಿ ತರಬೇತಿ ನೀಡುವ ನಿಟ್ಟಿನಲ್ಲಿ ಗುಡ್ ವಾಯ್ಸ್ ಸಂಗೀತ ತರಬೇತಿ ಸಂಸ್ಥೆ ಉತ್ತಮ ಕಾರ್ಯವೆಸಗುತ್ತಿದೆ ಎಂದು ಹರ್ಷಿಸಿದ ಅವರು ದೇವರಾಜು ಅವರ ಮಾರ್ಗದರ್ಶನದಲ್ಲಿ ಉತ್ತಮ ಕಲಾವಿದರು ರೂಪುಗೊಳ್ಳಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಖ್ಯಾತ ಕೊಳಲು ವಾದಕ ಎನ್ .ಎಸ್ .ಮಣಿ ಹಾಗೂ ಸಬಲವಾದ ಕ ಟುಡೆಂಟ್ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವೈದ್ಯ ಉಮೇಶ್, ಶ್ರೀರಂಗಪಟ್ಟಣದ ಶಶಿಕುಮಾರ್ ಭಾಗವಹಿಸಿದ್ದರು.
ಶಾಲಾ ವಾರ್ಷಿಕೋತ್ಸವ ದ ಅಂಗವಾಗಿ ಗಾಯಕ ಕಲಾಶ್ರೀ ಸಿ.ಪಿ. ವಿದ್ಯಾಶಂಕರ್ ಹಾಗೂ ಯುವ ಗಾಯಕ ಗಾಮನಹಳ್ಳಿ ಸ್ವಾಮಿ ಮತ್ತು ತಂಡ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಎಲ್ಲರ ಮುದಗೊಳಿಸಿತು.
ವಾದ್ಯ ಸಹಕಾರದಲ್ಲಿ ಕೀಬೋರ್ಡ್ ನಲ್ಲಿ ದೇವರಾಜ್, ತಬಲ ಜಿ. ವೆಂಕಟೇಶ್ , ಹಾಗೂ ರಿದಂ ಪ್ಯಾಡ್ ನಲ್ಲಿ ಮೈಸೂರಿನ ಮೂರ್ತಿಯವರು ಸಹಕಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ನಿವೃತ್ತ ಶಿಕ್ಷಕ ಕಲಾವಿದ ಜನಾರ್ಧನ್ ಕೊಂಡ್ಲಿ ಕಾರ್ಯಕ್ರಮವನ್ನು ಆಕರ್ಷಕವಾಗಿ ನಿರೂಪಿಸಿದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ತರಬೇತಿ ಶಾಲೆಯ ಮಕ್ಕಳಿಂದ ಗಿಟಾರ್ ವಾದನ , ಕೀಬೋರ್ಡ್ ವಾದನ ಯಶಸ್ವಿಯಾಗಿ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತರಬೇತಿ ಸಂಸ್ಥೆಯ ವ್ಯವಸ್ಥಾಪಕ ಹಾಗೂ ತರಬೇತುದಾರ ಸಿ ದೇವರಾಜ್ ವಹಿಸಿದ್ದರು.

Share This Article
Leave a comment