January 5, 2025

Newsnap Kannada

The World at your finger tips!

free , bus , pass

Free bus pass - only up to 50 K.M from home ? ಉಚಿತ ಬಸ್ ಪಾಸ್ - ಮನೆಯಿಂದ 50 K.M ವರೆಗೆ ಮಾತ್ರ ?

ಸಾರಿಗೆ ಬಸ್-ಕಾರು ಅಪಘಾತ : ಮಹಿಳಾ ಪಿಎಸ್ಐ ಸೇರಿ ನಾಲ್ವರ ದುರಂತ ಸಾವು

Spread the love

ಜನವರಿಯಲ್ಲಿ ದುರಂತಗಳ ಸರಮಾಲೆ ನಡೆದಿದೆ . ಭಾನುವಾರ ಕೂಡ
ಕೆಎಸ್ಆರ್ ಟಿಸಿ ಬಸ್ ಹಾಗೂ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪಿದ್ದಾರೆ.

ಈ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಬಳಿ ಜರುಗಿದೆ.

ಬೆಳಗಾವಿಯಿಂದ ಸಾರಿಗೆ ಬಸ್ ಯರಹಟ್ಟಿಯಿಂದ ಬೆಳಗಾವಿಯತ್ತ ಹೊರಟಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಅಪಘಾತದಲ್ಲಿ ಮಹಿಳಾ ಪಿ ಎಸ್ ಐ ಸಿಬ್ಬಂದಿ ಸೇರಿ ನಾಲ್ವರ ಸಾವನ್ನಪ್ಪಿದ್ದಾರೆಂದು ಗೊತ್ತಾಗಿದೆ.ಬೆಳಗಾವಿ ಸಹ್ಯಾದ್ರಿ ನಗರ ನಿವಾಸಿಗಳಾದ ಪಿಎಸ್ ಐ ಲಕ್ಷ್ಮೀ ಪವಾರ್, ಅಂಕಿತಾ ಪವಾರ್, ದೀಪಾ ಶಹಾಪುರಕರ್ , ಪ್ರಸಾದ್ ಪವಾರ್ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ.‌

ಘಟನಾ ಸ್ಥಳಕ್ಕೆ ಮುರಗೋಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!