ಮಂಡ್ಯದಲ್ಲಿ ಜೋಡೆತ್ತಿನ ಕರಾಮತ್ತು! ಎತ್ತಿನ ಗಾಡಿಯಲ್ಲಿ 14.55 ಟನ್ ಕಬ್ಬು ಸಾಗಾಣಿಕೆ

Team Newsnap
1 Min Read

ಮಂಡ್ಯದಲ್ಲಿ ಜೋಡೆತ್ತು ಹವಾ ಶುರುವಾಗಿದೆ. ಅಂದಹಾಗೆ ಇವು ಎಲೆಕ್ಷನ್​ ಜೋಡೆತ್ತಲ್ಲ. ಅಸಲಿ ಜೋಡೆತ್ತು.

ಬರೋಬ್ಬರಿ 14.55 ಟನ್​​​​ ಅಂದ್ರೆ 14,550 ಕೆ ಜಿ​​ ಕಬ್ಬನ್ನು ಎರಡು ಎತ್ತುಗಳು ಎಳೆದಿವೆ.

ಹೆಚ್. ಮಲ್ಲೀಗೆರೆ ಗ್ರಾಮದ ವಿನಾಯಕ ಗೆಳೆಯರ ಬಳಗದ ಯುವಕರು ಎತ್ತಿನಗಾಡಿಯಲ್ಲಿ ಕಬ್ಬು ತುಂಬಿಕೊಂಡು ಸುಮಾರು 3 ಕಿ.ಮೀ ಸಾಗಿದ್ದಾರೆ.

ಕಬ್ಬಿನಗಾಡಿ ನೋಡಲು ನೂರಾರು ರೈತರು ಮುಗಿ ಬಿದ್ದಿದ್ದಾರೆ. ಸಿಳ್ಳೆ ಹಾಕುತ್ತಾ, ಜೈಕಾರ ಹಾಕುತ್ತಾ ಜನರು ಪ್ರೋತ್ಸಾಹ ನೀಡಿದ್ದಾರೆ. 3 ಕಿ.ಮೀ ಉದ್ದ ಈ ದೃಶ್ಯ ನೋಡಲು ಜನರು ಕಾದು ನಿಂತಿದ್ದರು.

ಈವರೆಗೆ ಹೆಚ್ಚಂದ್ರೆ 12 ಟನ್ ಕಬ್ಬು ಎಳೆದ ದೃಶ್ಯಗಳು ಕಂಡು ಬಂದಿದ್ದವು. ಆದ್ರೆ 14.55 ಟನ್ ಕಬ್ಬು ತುಂಬಿ ಸಾಧನೆ ಮಾಡಿದ್ದು ಇದೇ ಮೊದಲು.

ಮತ್ತೊಂದು ಕಡೆ ಇಷ್ಟೊಂದು ಪ್ರಮಾಣದ ಕಬ್ಬನ್ನು ತುಂಬಿ ಎರಡು ಎತ್ತುಗಳ ಕೈಲಿ ಎಳೆಸಿದ್ದಕ್ಕೆ ಪ್ರಾಣಿಪ್ರಿಯರು ಆಕ್ರೋಶವನ್ನೂ ಹೊರಹಾಕಿದ್ದಾರೆ. ಮೂಕ ಪ್ರಾಣಿಗಳಿಗೆ ಈ ರೀತಿ ಹಿಂಸೆ ಕೊಟ್ಟಿದ್ದು ಸರೀನಾ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.

Share This Article
Leave a comment