ಸಾರಿಗೆ ನೌಕರರ‌ ಸಂಧಾನ ಯಶಸ್ವಿ: ಇಂದು ರಾತ್ರಿಯಿಂದಲೇ ಬಸ್ ಸಂಚಾರ ಆರಂಭ

Team Newsnap
1 Min Read
Free bus pass - only up to 50 K.M from home ? ಉಚಿತ ಬಸ್ ಪಾಸ್ - ಮನೆಯಿಂದ 50 K.M ವರೆಗೆ ಮಾತ್ರ ?

ಸರ್ಕಾರ ಮತ್ತು ಸಾರಿಗೆ ನೌಕರರ ಸಂಧಾನ ಯಶಸ್ವಿಯಾಗಿದೆ. ಈ ರಾತ್ರಿ ಯಿಂದಲೇ ಬಸ್‍ಗಳು ರಸ್ತೆಗೆ ಇಳಿಯಲಿವೆ.

ಕಳೆದ ಮೂರು ದಿನಗಳಿಂದ ಸ್ಥಗಿತವಾಗಿದ್ದ ಸಂಚಾರ ವ್ಯವಸ್ಥೆ ಪುನಃ ಆರಂಭವಾಗಲಿದೆ.

ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರ ಒಪ್ಪಿಲ್ಲ. ಉಳಿದಂತೆ 8 ಬೇಡಿಕೆಯನ್ನು ಸರ್ಕಾರ ಈಡೇರಿಸುವ ಭರವಸೆಯನ್ನು ನೀಡಿದೆ.

ಸಭೆ ಬಳಿಕ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ಧ ಕೋಡಿಹಳ್ಳಿ ಚಂದ್ರಶೇಖರ್, ನಾವು ಕಳುಹಿಸಿದ ತಂಡ ವೇದಿಕೆಯನ್ನು ತಲುಪಿಲ್ಲ. ನಾಳೆಯಿಂದ ಬಸ್ ಸಂಚಾರ ಎಂದಿನಂತೆ ಆರಂಭವಾಗಲಿದೆ. ಮಾಧ್ಯಮಗಳಲ್ಲಿ ಸಂಧಾನ ಯಶಸ್ವಿ ಎಂಬ ವರದಿ ನೋಡಿದ್ದೇನೆ. ಮುಂದಿನ ದಿನಗಳಲ್ಲಿ ನೌಕರರ ಬಾಳಲ್ಲಿ ಬೆಳಕು ಬರಲಿದೆ ಎಂದು ಹೇಳಿದರು.

ಸಂಧಾನ ಸಭೆಯಲ್ಲಿ ಒಪ್ಪಿದ ಬೇಡಿಕೆ ಗಳು:
  • ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಜಾರಿ
  • ಕೋವಿಡ್-19 ಸೋಂಕಿನಿಂದ ಮೃತ ಸಿಬ್ಬಂದಿಯ ಕುಟುಂಬಕ್ಕೆ 30 ಲಕ್ಷ ರು ಪರಿಹಾರ
  • ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನ.
  • ನೌಕರರ ತರಬೇತಿ ಅವಧಿ 2 ರಿಂದ ಒಂದು ವರ್ಷಕ್ಕೆ ಇಳಿಕೆ.
  • ನಿಗಮದಲ್ಲಿ ಹೆಚ್.ಆರ್.ಎಂ.ಎಸ್. (ಮಾನವ ಸಂಪನ್ಮೂಲ) ವ್ಯವಸ್ಥೆ ಜಾರಿ.
  • ಸಿಬ್ಬಂದಿಯ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ನಿರ್ಧಾರ.
  • ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ.
  • ವೇತನ ಪರಿಷ್ಕರಣೆ, ಆರನೇ ವೇತನ ಆಯೋಗದ ಜಾರಿ ನಡೆಸುವ ಸಂಬಂಧ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಿ ತೀರ್ಮಾನ
Share This Article
Leave a comment