ತಲಕಾಡು ಪಂಚಲಿಂಗ ದರ್ಶನ ಮಹೋತ್ಸವ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್ ಟಿ ಎಸ್

Team Newsnap
1 Min Read
  • ಜಾತ್ರಾ ಮಹೋತ್ಸವ ನಿರ್ವಿಘ್ನವಾಗಿ ನೆರವೇರುವಂತೆ ವೈದ್ಯನಾಥೇಶ್ವರನಲ್ಲಿ ಪ್ರಾರ್ಥನೆ
  • ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಲು ಮನವಿ

ತಲಕಾಡು ಶ್ರೀ ವೈದ್ಯನಾಥೇಶ್ವರ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಪಂಚಲಿಂಗ ದರ್ಶನ ಜಾತ್ರಾ ಮಹೋತ್ಸವ 2020ರ ಸಿದ್ಧತೆಗಳನ್ನು ಪರಿಶೀಲನೆ ನಡಿಸಿದರು.

ವೈದ್ಯನಾಥೇಶ್ವರ ದೇಗುಲಕ್ಕೆ ತೆರಳಿ ಪೂಜೆ ನರೆವೇರಿಸಿದ ಸಚಿವರು, ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಲಿ, ನಾಡಿನ ಸಮಸ್ತ ಜನತೆಗೆ ದೇವರು ಒಳಿತನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.

ನಾಳೆಯಿಂದ ಮಹೋತ್ಸವ ಆರಂಭ:

talakadu2

ಸೋಮವಾರ ಕುಹುಯೋಗ ಜ್ಯೇಷ್ಠ ನಕ್ಷತ್ರ ಮುಂಜಾನೆ 4.30ರಿಂದ 7.30ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪಂಚಲಿಂಗ ದರ್ಶನ ಮಹೋತ್ಸವದ ಮಹಾಪೂಜೆ, ಮಾಹಾಭಿಷೇಕದೊಂದಿಗೆ ಪ್ರಾರಂಭಗೊಳ್ಳಲಿದೆ. ಈ ಹಿಂದೆ 2013ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ನಡೆದಿತ್ತು.

ಈಗ ಏಳು ವರ್ಷದ ನಂತರ ಬಂದ ಮಹೋತ್ಸವದಲ್ಲಿ ಸ್ವಾಮಿ ವೈದ್ಯನಾಥೇಶ್ವರನು ನಾಡಿನ ಸಮಸ್ತ ಜನತೆಗೆ ದೇವರು ಒಳಿತು ಮಾಡಲಿ ಎಂದು ಸಚಿವರು ಪ್ರಾರ್ಥಸಿದ್ದಾರೆ.

ಕಡ್ಡಾಯ ಮಾಸ್ಕ್ ಧರಿಸಿ
ಕೋವಿಡ್ 19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸ್ ಬಳಸಿ ಜನತೆಯಲ್ಲಿ ಪಂಚಲಿಂಗಗಳ ದರ್ಶನ ಪಡೆಯಲು ಸಚಿವರು ಮನವಿ ಮಾಡಿದರು.

Share This Article
Leave a comment