ರಾಜ್ಯಾದ್ಯಂತ ಇಂದಿನಿಂದ ಮೇ 20 ರವರೆಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನ‌ಕ್ಕೆ ಚಾಲನೆ

Team Newsnap
1 Min Read

ರಾಜ್ಯಾದ್ಯಂತ ಮೇ 5 ರಿಂದ 20 ರವರೆಗೆ ಟ್ರಾನ್ಸ್‌ಫಾರ್ಮರ್‌ ನಿರ್ವಹಣಾ ಅಭಿಯಾನ ನಡೆಸಲು ಇಂಧನ ಇಲಾಖೆ ನಿರ್ಧರಿಸಿದೆ.

ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಂಬಂಧಿತ ಅವಘಡ ತಪ್ಪಿಸುವುದಕ್ಕಾಗಿ ರಾಜ್ಯಾದ್ಯಂತ ಮೇ 5 ರಿಂದ 20 ರವರೆಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನ ನಡೆಸಲು ತೀರ್ಮಾನಿಸಿದೆ.

ಕಳೆದ ಒಂದು ತಿಂಗಳಲ್ಲಿ ನಡೆದ ಟ್ರಾನ್ಸ್‌ಫಾರ್ಮರ್ ದುರಂತಗಳ ಹಿನ್ನೆಲೆಯಲ್ಲಿ ಈ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ

ಅಧಿಕಾರಿಗಳಿಗೂ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ನಿರ್ದೇಶನ ನೀಡಿ,
ರಾಜ್ಯದಲ್ಲಿ ಹದಿನೈದು ವರ್ಷಕ್ಕಿಂತ ಹಳೆಯ ಪರಿವರ್ತಕಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ಮಳೆಗಾಲದಲ್ಲಿ ಅವುಗಳು ನಿರ್ವಹಣಾ ಸಮಸ್ಯೆ ಉಂಟಾಗುತ್ತಿವೆ. ಮಳೆಗಾಲದಲ್ಲಿ ಸಿಡಿಲು ಇತ್ಯಾದಿ ಕಾರಣಗಳಿಂದ ಪರಿವರ್ತಕಗಳ ಹಾನಿ ಸಾಧ್ಯತೆ ಇದೆ. ಜೊತೆಗೆ ಅಧಿಕ ಲೋಡ್‌ನಿಂದ ಟ್ರಾನ್ಸ್‌ಫಾರ್ಮರ್ ಹಾನಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಅಭಿಯಾನ ನಡೆಸಲಾಗುತ್ತಿದೆ.

ಟ್ರಾನ್ಸ್‌ಫಾರ್ಮರ್‌ಗಳ ರಿಪೇರಿಗೆ ಇಂಧನ ಇಲಾಖೆ ಪ್ರತಿವರ್ಷ 150 ಕೋಟಿ ರೂ. ವೆಚ್ಚ ಮಾಡುತ್ತದೆ. ನಿರ್ವಹಣಾ ಕೆಲಸವನ್ನು ಕಾಲ ಕಾಲಕ್ಕೆ ನಡೆಸಿದರೆ ರಿಪೇರಿ ವೆಚ್ಚ ತಗ್ಗಿಸುವುದಕ್ಕೆ ಸಾಧ್ಯವಿದೆ. ಜತೆಗೆ ಎಲ್ಲಿ ಹೊಸ ಟ್ರಾನ್ಸ್ ಫಾರ್ಮರ್‌ಗಳ ತುರ್ತು ಅಗತ್ಯವಿದೆ ಎಂಬುದನ್ನೂ ಈ ಅಭಿಯಾನದ ಮೂಲಕ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹದಿನೈದು ದಿನಗಳ‌ ಕಾಲ ಅಭಿಯಾನ ನಡೆಸಲು ಸೂಚನೆ ನೀಡಲಾಗಿದೆ.

Share This Article
Leave a comment