December 25, 2024

Newsnap Kannada

The World at your finger tips!

gavrav g

ಗೌರವ ಗುಪ್ತಾ ಎತ್ತಂಗಡಿ :ತುಷಾರ್ BBMP ನೂತನ ಆಯುಕ್ತ17 ಮಂದಿ IAS ಅಧಿಕಾರಿಗಳ ವರ್ಗಾವಣೆ

Spread the love

ರಾಜ್ಯ ಸರ್ಕಾರ 17 ಮಂದಿ IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರನ್ನು ವರ್ಗಾವಣೆ ಮಾಡಲಾಗಿದೆ.

ಗೌರವ್‌ ಗುಪ್ತರನ್ನು ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.ಬಿಬಿಎಂಪಿ ಮುಖ್ಯ ಆಯುಕ್ತರಾಗಿ ತುಷಾರ್‌ ಗಿರಿನಾಥ್‌ ಅವರನ್ನು ನಿಯೋಜಿಸಲಾಗಿದೆ.ಬೆಳಗಾವಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆ ಜಿಲ್ಲಾಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ.

ನಿತೇಶ್‌ ಪಾಟೀಲ್‌ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ, ಗುರುದತ್‌ ಹೆಗಡೆ ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ.

ವರ್ಗಾವಣೆಯಾಗಿರುವ IAS ಅಧಿಕಾರಿಗಳ ಪಟ್ಟಿ :

  1. ಗೌರವ್‌ ಗುಪ್ತಾ- ACS, ಮೂಲಸೌಕರ್ಯ ಅಭಿವೃದ್ಧಿ
  2. ತುಷಾರ್‌ ಗಿರಿನಾಥ್‌ – BBMP ನೂತನ ಮುಖ್ಯ ಆಯುಕ್ತ
  3. ಮನೋಜ್‌ ಜೈನ್‌ – ಕಾರ್ಮಿಕ ಇಲಾಖೆಯ ಕಾರ್ಯದರ್ಶಿ
  4. ಟಿ.ಕೆ.ಅನಿಲ್‌ಕುಮಾರ್‌- ಪ್ರಧಾನ ಕಾರ್ಯದರ್ಶಿ, ಕಂದಾಯ
  5. ವಿ.ಪೊನ್ನುರಾಜು- ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ
  6. ಖುಷ್ಬೂ ಜಿ. ಚೌಧರಿ – ಉಪ ಆಯುಕ್ತರು, ಕರ್ನಾಟಕ ಭವನ
  7. ಡಾ. ರಾಜೇಂದ್ರ ಕೆ. – ಕಾರ್ಯದರ್ಶಿ, ಕೆಪಿಎಸ್‌ಸಿ
  8. ಎಂ.ಜಿ.ಹಿರೇಮಠ್‌ – ವ್ಯವಸ್ಥಾಪಕ ನಿರ್ದೇಶಕ, KRIDL.
  9. ಡಾ. ನವೀನ್‌ ಭಟ್‌ ವೈ. – ನಿರ್ದೇಶಕ, KSRTC.
  10. ಡಾ.ದಿಲೀಶ್‌ ಸಸಿ. – ನಿರ್ದೇಶಕ, EDCS, DPAR
  11. ನಿತೇಶ್‌ ಪಾಟೀಲ್‌ – ಜಿಲ್ಲಾಧಿಕಾರಿ, ಬೆಳಗಾವಿ
  12. ಗುರುದತ್ತ ಹೆಗ್ಡೆ – ಜಿಲ್ಲಾಧಿಕಾರಿ, ಧಾರವಾಡ
  13. ಭೂಬಾಲನ್‌ ಟಿ. – ಜಿಲ್ಲಾಧಿಕಾರಿ, ಬಾಗಲಕೋಟೆ
  14. ಭರತ್‌ ಎಸ್‌. MD- ವಾಯುವ್ಯ ಸಾರಿಗೆ ಇಲಾಖೆ.
  15. ಶಿಲ್ಪಾ ಎಂ. MD – ನಗರ ಮೂಲಸೌಕರ್ಯ ಅಭಿವೃದ್ಧಿ
  16. ಪ್ರಸ್ನನ್ನ ಹೆಚ್‌- ಸಿಇಒ, ಜಿಲ್ಲಾ ಪಂಚಾಯತ್‌, ಉಡುಪಿ
  17. ಗಿರೀಶ್‌ ದಿಲೀಪ್‌ ಬಡೋಲೆ CEO, ಜಿಪಂ ಕಲಬುರಗಿ ಕರ್ನಾಟಕ ರಾಜ್ಯ ಬಿಬಿಎಂಪಿ ಮುಖ್ಯ ಆಯುಕ್ತ.
ias 1
ias2
ias3

Copyright © All rights reserved Newsnap | Newsever by AF themes.
error: Content is protected !!