ರಾಜ್ಯದಲ್ಲಿ 16 KAS ಅಧಿಕಾರಿಗಳ ವರ್ಗಾವಣೆ

Team Newsnap
1 Min Read

ಬೆಂಗಳೂರು: ರಾಜ್ಯ ಸರ್ಕಾರ 16 ಮಂದಿ ಕೆ ಎ ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ.

ಸರ್ಕಾರ ವರ್ಗಾವಣೆ ಅಧಿಸೂಚನೆ ಹೊರಡಿಸಿದೆ, ಸ್ಥಳ ನಿರೀಕ್ಷೆಯಲ್ಲಿದ್ದಂತ ಡಾ.ನಾಗರಾಜು ಎಸ್ ಅವರನ್ನು ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ ರಿಜಿಸ್ಟಾರ್ ಆಗಿ ನೇಮಕ ಮಾಡಲಾಗಿದೆ.

ಇಸ್ಲಾವುದ್ದೀನ್ ಗದ್ಯಾಳ ಅವರನ್ನು ಬೆಂಗಳೂರಿನ ಭೂ ಉಸ್ತುವಾರಿ, ಯೋಜನೆ ಮತ್ತು ಇತರೆ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರನ್ನಾಗಿ ನಿಯೋಜಿಸಿದೆ.

ಸ್ಥಳ ನಿರೀಕ್ಷೆಯಲ್ಲಿದ್ದಂತ ರುದ್ದೇಶ್ ಎಸ್ ಎನ್ ಅವರನ್ನು ಶ್ರೀ ಕೃಷ್ಣದೇವರಾಯ ವಿವಿಯ ಆಡಳಿತ ವಿಭಾಗದ ಕುಲಸಚಿವರನ್ನಾಗಿ ವರ್ಗಾವಣೆ ಮಾಡಿದೆ.

ಜಿ.ವಿ ನಾಗರಾಜ್ ಅವರನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ಪ್ರಧಾನ ವ್ಯವಸ್ಥಾಪಕರನ್ನಾಗಿ ವರ್ಗಾವಣೆ ಮಾಡಿದೆ.

ರಾಜು ಮೊಗವೀರ ಕೆ ಎವರನ್ನು ಬಿಬಿಎಂಪಿಯ ಕೌನ್ಸಿಲ್ ಕಾರ್ಯದರ್ಶಿಯಾಗಿ, ಸಿದ್ರಾಮೇಶ್ವರ ಅವರನ್ನು ವಿಜಯನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ನಿಯೋಜಿಸಿದೆ.

16 ಕೆಎಎಸ್ ಅಧಿಕಾರಿಗಳ ವರ್ಗಾವಣೆ :

WhatsApp Image 2023 09 13 at 1.42.23 PM
WhatsApp Image 2023 09 13 at 1.42.32 PM

Share This Article
Leave a comment