ಮತ್ತೆ 15 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

Newsnap Team
2 Min Read
Transfer of 15 more IPS officers ಮತ್ತೆ 15 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಆಡಳಿತ ಯಂತ್ರದ ಚುರುಕಿಗೆ ಇಂದು 15 ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆ ವಿವರ :

  • ಡಾ.ಕೆ ರಾಮಚಂದ್ರ ರಾವ್ ಅವರನ್ನು ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ನ ಎಡಿಜಿಪಿ ಮತ್ತು ಎಂ.ಡಿಯಾಗಿ ನೇಮಿಸಿದೆ.
  • ಮಾಲಿನಿ ಕೃಷ್ಣ ಮೂರ್ತಿ ಅವರನ್ನು ಪ್ರಿಜನ್ ಅಂಡ್ ಕರೆಕ್ಷನ್ ಸರ್ವೀಸ್ ಬೆಂಗಳೂರು ಇಲ್ಲಿನ ಎಡಿಜಿಪಿಯಾಗಿ ನಿಯೋಜಿಸಿದೆ.
  • ಜೆ ಅರುಣ್ ಚಕ್ರವರ್ತಿ ಅವರನ್ನು ಎಜಿಜಿಪಿ ಡೈರೆಕ್ಟರೇಟ್ ಆಪ್ ಸಿವಿಲ್ ರೈಟ್ಸ್ ಎನ್ಪೋರ್ಸ್ ಮೆಂಟ್ ಆಗಿ ನೇಮಿಸಿದೆ.
  • ಮನೀಷ್ ಕರ್ಬೀಕರ್ ಅವರನ್ನು ಎಕಾನಮಿಕಲ್ ಎಫೆನ್ಸಸ್, ಕ್ರಿಮಿನಲ್ ಇನ್ವಿಸ್ಟಿಗೇಷನ್ ಡಿಪಾರ್ಟ್ ಮೆಂಟ್ ನ ಎಡಿಜಿಪಿಯಾಗಿ ನೇಮಿಸಿದೆ.
  • ಎಂ ಚಂದ್ರಶೇಖರ್ ಅವರನ್ನು ಎಡಿಜಿಪಿ ಇಂಡರ್ನಲ್ ಸೆಕ್ಯೂರಿಟಿ,
  • ವಿಪುಲ್ ಕುಮಾರ್ ಅವರನ್ನು ಬೆಂಗಳೂರು ಈಸ್ಟ್ ವಿಭಾಗದ ಎಸಿಪಿಯಾಗಿ ವರ್ಗಾವಣೆ ಮಾಡಿದೆ.
  • ಪರ್ವಿನ್ ಮಧುಕರ್ ಪವಾರ್ ಅವರನ್ನು ಐಜಿಪಿ, ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ ಮೆಂಟ್ ಗೆ ವರ್ಗಾವಣೆ ಮಾಡಿದೆ.
  • ಸಂದೀಪ್ ಪಾಟೀಲ್ ಅವರನ್ನು ಕೆ ಎಸ್ ಆರ್ ಪಿಯ ಐಜಿಪಿ
  • ವಿಕಾಸ್ ಕುಮಾರ್ ವಿಕಾಸ್ಟರ್ನಲ್ ಸೆಕ್ಯೂರಿಟಿ ವಿಭಾಗದ ಐಜಿಪಿ
  • ರಮಣ್ ಗುಪ್ತ ಅವರನ್ನು ಬೆಳಗಾವಿಯ ನಾರ್ಥರನ್ ರೇಂಜ್ ಐಜಿಪಿಯಾಗಿ ನೇಮಿಸಿದೆ.
  • ಎಸ್ ಎನ್ ಸಿದ್ದರಾಮಪ್ಪ ಅವರನ್ನು ಐಜಿಪಿ, ಬೆಂಗಳೂರಿನ ಹೆಡ್ ಕ್ವಾಟ್ರಾಸ್-1ಗೆ ವರ್ಗಾವಣೆ ಮಾಡಿದೆ.
  • ಡಾ.ಎಂ.ಬಿ ಬೋರಲಿಂಗಯ್ಯ ಅವರನ್ನು ಸೌಥ್ರೆನ್ ರೇಂಜ್ ಮೈಸೂರು ಇಲ್ಲಿನ ಐಜಿಪಿಯಾಗಿ ವರ್ಗಾವಣೆ ಮಾಡಿದೆ.
  • ಸಿ ವಂಶಿ ಕೃಷ್ಣ ಅವರನ್ನು ಡಿಐಜಿಪಿ, ಎಕಾನಾಮಿಕ್ ಅಫೆನ್ಸಸ್, ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ ಮೆಂಟ್ ಗೆ ವರ್ಗಾವಣೆ ಮಾಡಿದೆ.
  • ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಸಿ.ಬಿ ರಿಷ್ಯಂತ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿಯಾಗಿ ನೇಮಿಸಲಾಗಿದೆ.

ರಾಮಚಂದ್ರ ರಾವ್- ಎಡಿಜಿಪಿ, ಪೊಲೀಸ್​ ಗೃಹ ನಿರ್ಮಾಣ ನಿಗಮ

  • ಮಾಲಿನಿ ಕೃಷ್ಣಮೂರ್ತಿ- ಎಡಿಜಿಪಿ, ಬಂದಿಖಾನೆ
  • ಅರುಣ್ ಚಕ್ರವರ್ತಿ- ಎಡಿಜಿಪಿ, ಡಿಸಿಆರ್​ಇ
  • ಮನೀಷ್ ಕರ್ಬಿಕರ್- ಎಡಿಜಿಪಿ, ಸಿಐಡಿ
  • ಚಂದ್ರಶೇಖರ್- ಐಎಸ್ ಡಿ, ಎಡಿಜಿಪಿ
  • ವಿಪುಲ್ ಕುಮಾರ್- ಹೆಚ್ಚುವರಿ ಪೊಲೀಸ್ ಆಯುಕ್ತ ಪೂರ್ವ ವಲಯ
  • ಪ್ರವೀಣ್ ಮಧುಕರ್ ಪವಾರ್- ಐಜಿಪಿ ಸಿಐಡಿ
  • ಸತೀಶ್ ಕುಮಾರ್- ಹೆಚ್ಚುವರಿ ಪೊಲೀಸ್ ಆಯುಕ್ತ ಪಶ್ಚಿಮ ವಲಯ
  • ಸಂದೀಪ್ ಪಾಟಿಲ್- ಕೆಎಸ್ಆರ್ ಪಿ ಐಜಿಪಿ
  • ವಿಕಾಸ್ ಕುಮಾರ್ ವಿಕಾಸ್- ಐಜಿಪಿ ಐಎಸ್ ಡಿ
  • ರಮಣ್ ಗುಪ್ತಾ-ಬೆಳಗಾವಿ ವಲಯ ಐಜಿಪಿ
  • ಸಿದ್ದರಾಮಪ್ಪ- ಕೇಂದ್ರ ಕಚೇರಿ ಐಜಿಪಿ
  • ಬೋರಲಿಂಗಯ್ಯ- ಮೈಸೂರು ವಲಯ ಡಿಐಜಿ
  • ವಂಶಿಕೃಷ್ಣ- ಡಿಐಜಿ ಸಿಐಡಿ
  • ರಿಷ್ಯಂತ್ – ದಕ್ಷಿಣ ಕನ್ನಡ ಎಸ್ ಪಿ

ಪಿಜಿ ನೀಟ್ ರದ್ದು : ಇನ್ಮುಂದೆ ‘ನೆಕ್ಸ್ಟ್’ ಪರೀಕ್ಷೆ ಎದುರಿಸಲು ಸಿದ್ದರಾಗಿ

ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ವರ್ಗಾವಣೆಗೆ ತಡೆ ತಂದಿರುವ ಹಿನ್ನಲೆಯಲ್ಲಿ ಮುಜುಗರಕ್ಕೀಡಾಗಿದ್ದ ಸರ್ಕಾರ, ಐಪಿಎಸ್ ಅಧಿಕಾರಿಗಳ ವರ್ಗಾವಣೆ ನಿರ್ಧಾರ ಬದಲಾವಣೆ ಮಾಡಿಕೊಂಡಿತ್ತು. ಬೆಂಗಳೂರಿನ ಕೇಂದ್ರ ವಿಭಾಗ, ಪಶ್ಚಿಮ, ಪೂರ್ವ, ಉತ್ತರ ಸೇರಿದಂತೆ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿಎಂ ಸಿದ್ದರಾಮಯ್ಯನವರ ಬಳಿ ಇತ್ತು. ಆದ್ರೆ, ರವಿ ಡಿ ಚೆನ್ನಣ್ಣನವರ್ ಕೊಟ್ಟ ಶಾಕ್​ನಿಂದಾಗಿ ಸಿಎಂ, ಅಧಿಕಾರಿಗಳ ವರ್ಗಾವಣೆ ಕೈಬಿಟ್ಟಿತ್ತು. ಆದ್ರೆ, ಇದೀಗ ಮತ್ತೆ ವರ್ಗಾವಣೆ ಸರ್ಕಾರ ಆದೇಶ ಹೊರಡಿಸಿದೆ.

WhatsApp Image 2023 06 20 at 3.13.03 PM
WhatsApp Image 2023 06 20 at 3.13.13 PM
WhatsApp Image 2023 06 20 at 3.14.23 PM
Share This Article
Leave a comment