ಸರ್ಕಾರದ ಆಡಳಿತ ಯಂತ್ರಕ್ಕೆ ಭಾರಿ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

Team Newsnap
1 Min Read
transfer of 14 IAS officers ಸರ್ಕಾರದ ಆಡಳಿತ ಯಂತ್ರಕ್ಕೆ ಭಾರಿ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಐಎಎಸ್ ಅಧಿಕಾರಿ ಜಾವೇದ್ ಅಖ್ತರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೆಡಿಕಲ್ ಎಜುಕೇಷನ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಹೊಣೆಗಾರಿಕೆ ವಹಿಸಿದೆ.

ಬಿಸಿ ಸತೀಶ ಅವರನ್ನು ಕೊಡಗು ಜಿಲ್ಲಾಧಿಕಾರಿಯಿಂದ ವರ್ಗಾವಣೆ ಮಾಡಿ, ಸುವರ್ಣ ಆರೋಗ್ಯ ಟ್ರಸ್ ಇಡಿಯಾಗಿ ನೇಮಿಸಿದೆ.

ಹುದ್ದೆಯ ನಿರೀಕ್ಷೆಯಲ್ಲಿದ್ದ ಡಾ.ಎಚ್ ಎನ್ ಗೋಪಾಲ್ ಕೃಷ್ಣ ಅವರನ್ನು ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಯ ಜೆಡಿ ಹುದ್ದೆಗೆ ನೇಮಕ ಮಾಡಿದೆ.

ಡಾ.ಶಿವಶಂಕರ್ ನ್ ಅವರನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಟ್ ನ ಎಂಡಿ ಸ್ಥಾನದಿಂದ ವರ್ಗಾವಣೆ ಮಾಡಿ, ಬೆಂಗಳೂರು ಗ್ರಾಮಾಂತರ ಡಿಸಿಯಾಗಿ ನೇಮಕ ಮಾಡಿದೆ.

ಅಕ್ರಮ ಪಾಷ ಅವರನ್ನು ಲೇಬರ್ ಕಮೀಷನರ್ ಸ್ಥಾನದಿಂದ ವರ್ಗಾವಣೆಗೊಳಿಸಿ, ಕೋಲಾರದ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದೆ.

ಹುದ್ದೆಯ ನಿರೀಕ್ಷೆಯಲ್ಲಿದ್ದ ಗುಂಗು ಬಾಯ್ ರಮೇಶ್ ಮನಕರ್ ಅವರನ್ನು ರಾಜ್ಯ ಮಾಹಿತಿ ಹಕ್ಕು ಆಯೋಗದ ಕಮೀಷನರ್ ಆಗಿ ನೇಮಕ ಮಾಡಿದೆ.

ಲತಾ ಆರ್ ಅವರನ್ನು ಬೆಂಗಳೂರು ಗ್ರಾಮಾಂತರ ಡಿಸಿ ಹುದ್ದೆಯಿಂದ ವರ್ಗಾವಣೆ ಮಾಡಿ, ಕರ್ನಾಟಕ ವುಮೆನ್ ಕಮೀಷನ್ ನ ಸೆಕ್ರೇಟರಿಯಾಗಿ ನೇಮಿಸಿದೆ.

ವರ್ಗಾವಣೆಗೆ ಗೊಂಡ 14 ಐಎಎಸ್ ಅಧಿಕಾರಿಗಳ ವಿವರ ಹೀಗಿದೆ :

ಇದನ್ನು ಓದಿ –ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ಮಾಡಿದ ಸರ್ಕಾರ

WhatsApp Image 2023 06 19 at 8.42.00 PM
WhatsApp Image 2023 06 19 at 8.43.07 PM
Share This Article
Leave a comment